HomeKarnatakaಫಸಲ್ ಭೀಮಾ ಬೆಳೆ ವಿಮೆಯಲ್ಲಿ 30 ಕೋಟಿ ರೂ ಹಣ ದುರ್ಬಳಕೆ: 11 ಜನರ ವಿರುದ್ಧ...

ಫಸಲ್ ಭೀಮಾ ಬೆಳೆ ವಿಮೆಯಲ್ಲಿ 30 ಕೋಟಿ ರೂ ಹಣ ದುರ್ಬಳಕೆ: 11 ಜನರ ವಿರುದ್ಧ ಎಫ್ಐಆರ್ ದಾಖಲು

ಬಾಗಲಕೋಟೆ: ಫಸಲ್ ಭೀಮಾ ಯೋಜನೆಯ ಬೆಳೆ ವಿಮೆಯಲ್ಲಿ 30 ಕೋಟಿ ರೂಪಾಯಿ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಸಹಾಯಕ ಕೃಷಿ ನಿರ್ದೇಶಕ ಸಿದ್ದಲಿಂಗೇಶ ದೊಡ್ದಮನಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಮೆಗುಡ್ಡ ಗ್ರಾಮದ ಕಲ್ಲಪ್ಪ ಹುಣಸೀಕಟ್ಟಿ, ಶ್ರೀನಿವಾಸ ಪಾಟೀಲ್, ಕಲ್ಮೇಶ್ ಜನ್ನೂರ, ಶ್ರೀನಿವಾಸ ಹುಣಸೀಕಟ್ಟಿ, ರಮೇಶ್ ಹುಣಸೀಕಟ್ಟಿ, ಪ್ರಕಾಶ್ ಕೋಮಾರ, ಶ್ರೀಕಾಂತ್ ಹಲಗಲಿ ಹಾಗೂ ಇನ್ ಶೂರೆನ್ಸ್ ಉದ್ಯೋಗಿಗಳಾದ ಯಶ್ವಂತ್, ರಾಕೇಶ್, ಪ್ರಕಾಶ್, ಅನಿಲ್ ವಿರುದ್ಧ ಬಾಗಲಕೋಟೆ ಮುಧೋಳ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳೆ ವಿಮೆ ಅಕ್ರಮದ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಅನಾಮಧೇಯ ಪತ್ರವೊಂದು ಬಂದಿತ್ತು. ಪತ್ರದ ಆಧಾರದ ಮೇಲೆ ಜಮಖಂಡಿ ಎಸಿ ಮುಧೋಳ ಕೃಷಿ ಅಧಿಕಾರಿಗೆ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಧೋಳ ಕೃಷೀ ಸಹಾಯಕ ಮಿರ್ದೇಶಕ ಸಿದ್ದಲಿಂಗೇಶ್ವರ ದೊಡ್ಡಮನಿ ದೂರು ನೀಡಿದ್ದರು.

ಬೆಳೆವಿಮೆ ಹೆಸರಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ದುರುಪಯೋಗಪಡಿಸಿಕೊಂಡು ಕಳೆದ ಐದು ವರ್ಷಗಳಿಂದ ವಂಚನೆ ನಡೆಯುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular