HomeKarnatakaನೇಣಿಗೆ ಕೊರಳೊಡ್ಡಿದ ಪ್ರಿಯತಮೆ; ವಿಷಯ ತಿಳಿದು ಆತ್ಮಹತ್ಯೆಗೆ ಶರಣಾದ ಪ್ರಿಯಕರ

ನೇಣಿಗೆ ಕೊರಳೊಡ್ಡಿದ ಪ್ರಿಯತಮೆ; ವಿಷಯ ತಿಳಿದು ಆತ್ಮಹತ್ಯೆಗೆ ಶರಣಾದ ಪ್ರಿಯಕರ

ಬಾಗಲಕೋಟೆ: ಪ್ರೇಮಿಗಳಿಬ್ಬರೂ ದುರಣ್ತ ಅಂತ್ಯ ಕಂಡಿರುವ ಘಟನೆ ಬಗಾಲಕೋಟೆಯಲ್ಲಿ ನಡೆದಿದೆ. ಪ್ರಿಯತಮೆ ನೇಣಿಗೆ ಕೊರಳೊಡ್ಡಿದ ವಿಷಯ ಕೇಳಿ ಆಕೆಯ ಪ್ರಿಯಕರ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಕೆ.ಹೆಚ್.ಡಿ.ಸಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಪ್ರಿಯತಮೆ ನೇಣಿಗೆ ಶರಣಾಗಿದ್ದರೆ, ವಿಷಯ ತಿಳಿದ ಪ್ರಿಯತಮ ರಬಕವಿಬನಹಟ್ಟಿ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪವಿತ್ರಾ(19) ಮತ್ತು ಕಾರ್ತಿಕ್​ ನಾಯಕ್(19)​ ಮೃತ ಪ್ರೇಮಿಗಳು. ನಿನ್ನೆ ಇಬ್ಬರ ಮಧ್ಯೆಯೂ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಇದಾದ ಬಳಿಕ ಮನನೊಂದು ಮೊದಲು ಪವಿತ್ರಾ ಮನೆಯಲ್ಲಿ ನೇಣಿಗೆ ಶರಣಾಗಿದ್ದಳು. ಸ್ಥಳಕ್ಕೆ ಬನಹಟ್ಟಿ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಪವಿತ್ರಾ ಸಾವನ್ನಪ್ಪಿದ ಸುದ್ದಿ ಕೇಳಿ ಕಾರ್ತಿಕ್ ಕೂಡ ದುಡುಕಿನ ನಿರ್ಧಾರ ಕೈಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಅಖಲಿಸಿಇಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669


For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular