HomeKarnatakaಮದುವೆಗೆ ಒಪ್ಪದ ಪೋಷಕರು: ಪ್ರೇಮಿಗಳಿಂದ ದುಡುಕಿನ ನಿರ್ಧಾರ; ಆತ್ಮಹತ್ಯೆಗೆ ಶರಣು

ಮದುವೆಗೆ ಒಪ್ಪದ ಪೋಷಕರು: ಪ್ರೇಮಿಗಳಿಂದ ದುಡುಕಿನ ನಿರ್ಧಾರ; ಆತ್ಮಹತ್ಯೆಗೆ ಶರಣು

ಬಾಗಲಕೋಟೆ: ಪ್ರೇಮಿಗಳಿಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಂದಗಾಂವ್ ಗ್ರಾಮದಲ್ಲಿ ನಡೆದಿದೆ.

ಸಚಿನ್ ದಳವಾಯಿ (22), ಪ್ರಿಯಾ ಮಡಿವಾಳರ (19) ಮೃತ ಪ್ರೇಮಿಗಳು. ಸಚಿನ್ ಹಾಗೂ ಪ್ರಿಯಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೂ ನಿರ್ಧರಿಸಿದ್ದರು, ಆದರೆ ಸಚಿನ್ ಮನೆಯಲ್ಲಿ ಮದುವೆಗೆ ಒಪ್ಪಿಲ್ಲ. ಇದೇ ಕಾರನಕ್ಕೆ ಇಬ್ಬರೂ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.

ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಸಚಿನ್ ಹಾಗೂ ಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular