HomeKarnatakaBIG NEWS: ಬಸ್ ಹತ್ತುವಾಗ ದುರಂತ; ನೂಕು ನುಗ್ಗಲಿನಿಂದ ಕೆಳಗೆ ಬಿದ್ದ ಚಾಲಕ ಕಂ ನಿರ್ವಾಹಕ;...

BIG NEWS: ಬಸ್ ಹತ್ತುವಾಗ ದುರಂತ; ನೂಕು ನುಗ್ಗಲಿನಿಂದ ಕೆಳಗೆ ಬಿದ್ದ ಚಾಲಕ ಕಂ ನಿರ್ವಾಹಕ; ಬಸ್ ಚಕ್ರಕ್ಕೆ ಸಿಲುಕಿ ದುರ್ಮರಣ

ಬಾಗಲಕೋಟೆ: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದಾಗಿ ಬಸ್ ನಲ್ಲಿ ಜನ ಜಂಗುಳಿ ಹೆಚ್ಚಾಗುತ್ತಿದೆ. ಬಸ್ ಹತ್ತುವ ವೇಳೆ ನೂಕು ನುಗ್ಗಲು ಉಂಟಾಗಿ ಕೆಳಗೆ ಬಿದ್ದ ಚಾಲಕ ಕಂ ನಿರ್ವಾಹಕನೇ ಮೃತಪಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಗದ್ಯಪ್ಪ ಗಡ್ಡಿ (50) ಮೃತ ವ್ಯಕ್ತಿ. ಬಾಗಲಕೋಟೆಯ ಹುನಗುಂಡ ತಾಲೂಕಿನ ಕೌಜಗನೂರು ಗ್ರಾಮದ ನಿವಾಸಿ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು.

ಬಾಗಲಕೋಟೆಯಿಂದ ಇಳಕಲ್ ಕಡೆ ತೆರಳುವ ಕೆ.ಎಸ್.ಆರ್.ಟಿ.ಸಿ ಬಸ್ ಏರುವ ವೇಳೆ ಬಸ್ ಹತ್ತಲು ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಗದ್ಯಪ್ಪ ಗಡ್ಡಿ ಕೆಳಗೆ ಬಿದ್ದು ಬಸ್ ಚಕ್ರದಡಿ ಸಿಲುಕಿಕೊಂಡಿದ್ದಾರೆ. ಕೆಳಗೆ ಬಿದ್ದಿದ್ದ ಗದ್ಯಪ್ಪ ಗಡ್ಡಿ ಮೇಲೆಯೇ ಬಸ್ ಹರಿದಿದ್ದು, ಚಾಲಕ ಕಂ ನಿರ್ವಾಹಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಾಗಲಕೋಟೆ ಸಂಚಾರಿ ಠಾಣೆಯಲ್ಲಿ ದೂರು ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular