HomeKarnatakaBREAKING NEWS: ಮೂರು ವರ್ಷದ ಮಗುವಿನ ಮೇಲೆ ಹುಚ್ಚುನಾಯಿ ದಾಳಿ; ಮಗು ಸ್ಥಿತಿ ಗಂಭೀರ

BREAKING NEWS: ಮೂರು ವರ್ಷದ ಮಗುವಿನ ಮೇಲೆ ಹುಚ್ಚುನಾಯಿ ದಾಳಿ; ಮಗು ಸ್ಥಿತಿ ಗಂಭೀರ

ಬಾಗಲಕೋಟೆ: ಮೂರು ವರ್ಷದ ಮಗುವಿನ ಮೇಲೆ ಹುಚ್ಚು ನಾಯಿ ದಾಳಿ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ಶಾಲೆಯ ಹಿಂಭಾಗದಲ್ಲಿ ನಡೆದಿದೆ.

ಗಂಗಾಧರ ಗಂಭೀರವಾಗಿ ಗಾಯಗೊಂಡಿರುವ ಮೂರು ವರ್ಷದ ಮಗು. ಹುಚ್ಚುನಾಯಿ ದಾಳಿಯಿಂದ ಮಗುವಿನ ತುಟಿ, ಕೆನ್ನೆ, ಬಲಗಣ್ಣು, ಕಿವಿಗಳಿಗೆ ಗಂಭೀರ ಗಾಯಗಳಾಗಿವೆ.

ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಕಲ್ ಭಾಗದಲ್ಲಿ ಹುಚ್ಚುನಾಯಿ ಹಾವಳಿ ಹೆಚ್ಚುತ್ತಿದ್ದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular