HomeLatest NewsBREAKING NEWS: ನರ್ಸ್ ಎಂದು ಹೇಳಿ ಆಸ್ಪತ್ರೆಯಿಂದಲೇ ನವಜಾತ ಶಿಶು ಕದ್ದೊಯ್ದ ಕಳ್ಳಿ!

BREAKING NEWS: ನರ್ಸ್ ಎಂದು ಹೇಳಿ ಆಸ್ಪತ್ರೆಯಿಂದಲೇ ನವಜಾತ ಶಿಶು ಕದ್ದೊಯ್ದ ಕಳ್ಳಿ!

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮಕ್ಕಳನ್ನೇ ಕದ್ದು ಪರಾರಿಯಾಗುತ್ತಿರುವ ಘಟನೆ ಹೆಚ್ಚುತ್ತಿದೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಎಂದು ಹೇಳಿಕೊಂಡು ಬಂದ ಮಹಿಳೆ ನವಜಾತ ಶಿಶುವನ್ನು ಕದ್ದೊಯ್ದಿರುವ ಘಟನೆ ನಡೆದಿದೆ.

ಮಾಬೂಬಿ (30) ಎಂಬುವವರ ಒಂದು ದಿನದ ಹೆಣ್ಣುಮಗುವನ್ನು ನರ್ಸ್ ವೇಷದಲ್ಲಿ ಬಂದ ಮಹಿಳೆ ಕದ್ದು ಪರಾರಿಯಾಗಿದ್ದಾಳೆ. ತಾನು ನರ್ಸ್, ಮಗುವಿಗೆ ಕಫ ತೆಗೆಯುವುದಾಗಿ ಹೇಳಿ ಮಗುವನ್ನು ಎತ್ತಿಕೊಂಡ ಮಹಿಳೆ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ. ಮಗುವಿನೊಂದಿಗೆ ಮಹಿಳೆ ನಾಪತ್ತೆಯಾಗಿದ್ದು, ಹೆತ್ತ ಕಂದಮ್ಮನನ್ನು ಕಳೆದುಕೊಂಡು ತಾಯಿ-ತಂದೆ ಕಂಗಾಲಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular