HomeLatest NewsBIG NEWS: ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮಗು ಕದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

BIG NEWS: ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮಗು ಕದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಹೆಸರಿನಲ್ಲಿ ಬಂದಿದ್ದ ಮಹಿಳೆ ಮಗು ಕದ್ದು ಪರಾರಿಯಾಗಿರುವ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ಒಂದು ದಿನದ ಹೆಣ್ಣುಮಗುವನ್ನು ಕಳ್ಳತನ ಮಾಡಿದ್ದ ಪ್ರಕರಣ ನಡೆದಿತ್ತು. ರಾಯದುರ್ಗ ತಾಲೂಕಿನ ಖಾನಪೇಟೆ ನಿವಾಸಿ ಸಾಕ್ಷಿ ಯಾದವಾದ (24) ಮಗು ಕದ್ದ ಮಹಿಳೆ. ಸದ್ಯ ಮಗುವನ್ನು ರಕ್ಷಿಸಲಾಗಿದೆ.

ಮಹಿಳೆ ಸಾಕ್ಷಿ ಯಾದವಾಡ ನಿನ್ನೆ ಜಿಲ್ಲಾಸ್ಪತ್ರೆಗೆ ಯಾವುದೇ ಅನುಮತಿ ಪಡೆಯದೇ ದಾಖಲಾಗಿದ್ದಾಳೆ. ಹೆರಿಗೆ ವಾರ್ಡ್ ನಲ್ಲಿ ಹೋಗಿ ಮಲಗಿದ್ದಾಳೆ. ಅಕ್ಕಪಕ್ಕದ ಬೆಡ್ ನಲ್ಲಿದ್ದವರಿಗೆ ನನಗೂ ಮಗುವಾಗಿದೆ ಎಂದಿದ್ದಾಳೆ. ಇಂದು ಮುಂಜಾನೆ 4:30ರ ಸುಮಾರಿಗೆ ತಾನು ನರ್ಸ್ ಎಂದು ಹೇಳಿಕೊಂಡು ಹೆರಿಗೆ ವಾರ್ಡ್ ನಲ್ಲಿ ಬೇರೊಬ್ಬರ ಮಗುವನ್ನು ಕಫ ತೆಗೆಯುವುದಾಗಿ ಹೇಳಿ ಎತ್ತಿಕೊಂಡು ಹೋಗಿ ತನ್ನ ಬಳಿ ಮಲಗಿಸಿಕೊಂಡಿದ್ದಾಳೆ. ಅತ್ತ ಮಗುವಿನ ತಾಯಿ ಎಷ್ಟು ಹೊತ್ತಾದರೂ ಮಗುವಿನ ಸುಳಿವಿಲ್ಲದಾಗ ವೈದ್ಯರಿಗೆ, ಆಸ್ಪತ್ರೆ ಸಿಬ್ಬಂದಿಗೆ ತಿಳಿಸಿದ್ದಾರೆ. ಹೆರಿಗೆ ವಾರ್ಡ್ ಪಕ್ಕದ ವಾರ್ಡ್ ನಲ್ಲಿ ಮಲಗಿದ್ದ ಸಾಕ್ಷಿ ಬಳಿ ಮಗು ಇರುವುದನ್ನು ಕಂಡು ವೈದ್ಯರು ಅನುಮಾನಗೊಂಡು ವಿಚಾರಿಸಿದ್ದಾರೆ. ಈ ವೇಳೆ ಸಾಕ್ಷಿ ಇದು ತನ್ನ ಮಗು ಎಂದಿದ್ದಾಳೆ. ಆದರೆ ಮಹಿಳೆಗೆ ಹೆರಿಗೆ ಆಗಿಲ್ಲ ಎಂಬ ಬಗ್ಗೆ ವೈದ್ಯರಿಗೆ ಸಂಶಯ ಬಂದಿದೆ. ಪರೀಕ್ಷಿಸುವುದಾಗಿ ಹೇಳಿ ವೈದ್ಯರು ಪರೀಕ್ಷಿಸಿದಾಗ ಮಹಿಳೆಗೆ ಹೆರಿಗೆಯಾಗಿಲ್ಲ. ಅದು ಆಕೆಯ ಮಗುವಲ್ಲ ಎಂಬುದು ಖಚಿತಪಟ್ಟಿದೆ. ಈ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ಸ್ಥಳಕ್ಕಾಗಮಿಸಿದ ಡಿವೈಎಸ್ ಪಿ ಮಹಾಂತೇಶ್ ಜಿದ್ದಿ ವಿಚಾರಣೆ ನಡೆಸಿದಾಗ ಮಹಿಳೆ ಮಗುವನ್ನು ಕದ್ದೊಯ್ಯಲು ಪ್ಲಾನ್ ಮಾಡಿರುವುದು ಬೆಳಕಿಗೆ ಬಂದಿದೆ. 2024ರಂದ ಸಾಕ್ಷಿ ಮಗುವನ್ನು ಕದಿಯಲು ಪ್ಲಾನ್ ಮಾಡುತ್ತಿದ್ದಳು. ಸಾಕ್ಷಿಗೆ ಆಕೆಯ ತಾಯಿ ಹಾಗೂ ಸಹೋದರಿಯರು ಸೇರಿ ಮೂವರು ಸಾಥ್ ನೀಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಸಾಕ್ಷಿ ಸೇರಿದಂತೆ ನಾಲ್ವರನ್ನು ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular