HomeLive NewsBIG NEWS: ದೆಹಲಿ ನಾಯಕರನ್ನು ಇವರೇ ಬಾಲದ ರೀತಿ ಆಡಿಸ್ತಾರೆ: ಸಿಎಂ, ಡಿಸಿಎಂ ವಿರುದ್ಧ ವಿಜಯೇಂದ್ರ...

BIG NEWS: ದೆಹಲಿ ನಾಯಕರನ್ನು ಇವರೇ ಬಾಲದ ರೀತಿ ಆಡಿಸ್ತಾರೆ: ಸಿಎಂ, ಡಿಸಿಎಂ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿರುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಹೈಕಮಾಂಡ್ ನಾಯಕರು ಕರೆದರು ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ. ದೆಹಲಿ ನಾಯಕರನ್ನು ಇವರೇ ಬಾಲದ ರೀತಿ ಆಡಿಸ್ತಾರೆ ಎಂದು ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದಷ್ಟು ದುರಾಡಳಿತದ, ಭ್ರಷ್ಟ ಸರ್ಕಾರವನ್ನು ಜನರು ನೋಡಿರಿಲಿಲ್ಲ. ಇವರ ಪ್ರಚಾರಕ್ಕಾಗಿ ವಿಜಯೋತ್ಸವದ ಹೆಸರಲ್ಲಿ ಕಾರ್ಯಕ್ರಮವನ್ನು ಮಾಡಿ 11 ಜನ ಮುಗ್ಧ, ಅಮಾಯಕರ ಸಾವಿಗೆ ಕಾರಣರಾಗಿದ್ದಾರೆ. ದುರಂತದ ನೈತಿಕತೆ ಹೊತ್ತು ಮೊದಲು ಕಾಂಗ್ರೆಸ್ ನಾಯಕರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular