HomeKarnatakaಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ: ಹಿಂಪಡೆಯಲು ಇನ್ನೂ ಸಮಯವಿದೆ; ಕಾದುನೋಡಿ ಎಂದ ಬಿ.ವೈ.ವಿಜಯೇಂದ್ರ

ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ: ಹಿಂಪಡೆಯಲು ಇನ್ನೂ ಸಮಯವಿದೆ; ಕಾದುನೋಡಿ ಎಂದ ಬಿ.ವೈ.ವಿಜಯೇಂದ್ರ

ಬಳ್ಳಾರಿ: ಬಿಜೆಪಿ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈಶ್ವರಪ್ಪ ನಾಮಪತ್ರ ಸಲ್ಲಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾದು ನೋಡಿ ಎಂದಿದ್ದಾರೆ.

ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆವ್ ಮಾತನಾಡಿದ ವಿಜಯೇಂದ್ರ, ಇನ್ನೂ ನಾಮಪತ್ರ ವಾಪಾಸ್ ಪಡೆಯಲು ಸಮಯವಿದೆ. ಹೊಸ ಚರ್ಚೆಗಳು ಬೇಡಿ.‌ ಕಾದು ನೋಡಿ ಎಂದು ಹೇಳಿದರು.

ನಾವು 28 ಸ್ಥಾನಗಳು ಗೆಲ್ಲಬೇಕು ಅನ್ನೋ ಗುರಿ ಇದೆ ಅಷ್ಟೆ. ಹೆಚ್ಚು ಸ್ಥಾನ ಗೆದ್ರೆ, ವಿಜಯೇಂದ್ರ ಸ್ಥಾನ ಗಟ್ಟಿಯಾಗುತ್ತದೆ ಎಂದು ತಿಳಿಸಿದರು.‌ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ.‌ ಯಡಿಯೂರಪ್ಪ ಆದೇಶದ ಮೇರೆಗೆ ನಾನು ಅವರ ಜತೆ ಇದ್ದು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular