HomeKarnatakaBIG NEWS: ಕೇಂದ್ರದ ವಿರುದ್ಧ ಕಾಂಗ್ರೆಸ್ 'ಚೊಂಬು' ಜಾಹೀರಾತು; ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

BIG NEWS: ಕೇಂದ್ರದ ವಿರುದ್ಧ ಕಾಂಗ್ರೆಸ್ ‘ಚೊಂಬು’ ಜಾಹೀರಾತು; ಸರ್ಕಾರದ ವಿರುದ್ಧ ಬಿ.ವೈ.ವಿಜಯೇಂದ್ರ ಆಕ್ರೋಶ

ಮೈಸೂರು: ಕೇಂದ್ರ ಸರ್ಕಾರ ರಾಜ್ಯಕ್ಕೆ ‘ಚೊಂಬು’ ನೀಡಿದೆ ಎಂಬ ಕಾಂಗ್ರೆಸ್ ಜಾಹೀರಾತು ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ನವರು ಏನಾದರೂ ಜಾಹೀರಾತು ನೀಡಲಿ, ಈ ಬಾರಿ ಮತ್ತೆ ಮೋದಿ ಅವರೇ ಪ್ರಧಾನಿ ಆಗಲಿದ್ದಾರೆ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ನವರು ಯಾವ ಜಾಹೀರಾತನ್ನಾದರೂ ನೀಡಲಿ ಆದರೆ ಜನರು ಈ ಬಾರಿ ಮತ್ತೆ ಮೋದಿಯವರನ್ನೇ ಗೆಲ್ಲಿಸುತ್ತಾರೆ ಎಂದು ಟಾಂಗ್ ನೀಡಿದರು.

ರೈತರ ಸಾಲ ಮನ್ನಾ ಹಾಗೂ ಕಾಂಗ್ರೆಸ್ ನ ಹೊಸ ಗ್ಯಾರಂಟಿಗಳ ಬಗ್ಗೆ ಮಾತನಾಡಿದ ವಿಜಯೇಂದ್ರ, ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಯಾವ ಭರವಸೆಗಳನ್ನೂ ಪೂರೈಸಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೆ ಏನಾದರೂ ಮಾಡುವುದು. ದೇಶದಲ್ಲಿ ಕಾಂಗ್ರೆಸ್ 50 ಸೀಟುಗಳನ್ನು ಗೆಲ್ಲಲ್ಲ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ಒಂದು ಸಮುದಾಯದ ಓಲೈಕೆಗಾಗಿ ಕೆಲಸ ಮಾಡುತ್ತಿದೆ. ನೇಹಾ ಹತ್ಯೆ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು. ಆರೋಪಿಗೆ ಕಹಿಣ ಶಿಕ್ಷೆ ನೀಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನದೆಸಲಿದೆ ಎಂದು ಎಚ್ಚರಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular