HomeKarnatakaBIG NEWS: ಯತ್ನಾಳ್ ಸ್ವಪ್ರತಿಷ್ಠೆಯ ಹೋರಾಟ ಅವರಿಗೆ ಶೋಭೆ ತರಲ್ಲ: ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ

BIG NEWS: ಯತ್ನಾಳ್ ಸ್ವಪ್ರತಿಷ್ಠೆಯ ಹೋರಾಟ ಅವರಿಗೆ ಶೋಭೆ ತರಲ್ಲ: ಮಾಜಿ ಸಿಎಂ ಯಡಿಯೂರಪ್ಪ ವಾಗ್ದಾಳಿ

ಬೆಂಗಳೂರು: ವಕ್ಫ್ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ತಂಡದಿಂದ ಪ್ರತ್ಯೇಕ ಹೋರಾಟ ್ನಡೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತ್ಯೇಕ ಹೋರಾಟ ಕೈಬಿಟ್ಟು ಯತ್ನಾಳ್ ನಮ್ಮ ಜೊತೆ ಕೈಜೋಡಿಸಲಿ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಯತ್ನಾಳ್ ಹಾಗೂ ಇತರರು ತಮ್ಮ ಹೋರಾಟ ಕೈ ಬಿಟ್ಟು ನಮ್ಮ ಜೊತೆ ಒಟ್ಟಾಗಿ ಕೆಲಸ ಮಾಡಿ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಮನವಿ ಮಾಡಿದರು. ಆದರೂ ಸಹ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಇದೆಲ್ಲ ಮಾಡುತ್ತಿರುವುದು ಅವರಿಗೆ ಶೋಭೆ ತರಲ್ಲ ಎಂದರು.

ಈಗಲಾದರೂ ಯತ್ನಾಳ್ ಹಾಗೂ ಎಲ್ಲರೂ ಜಾಗೃತರಾಗಿ ತಮ್ಮ ಹೋರಾಟ ಬಿಟ್ಟು ನಮ್ಮ ಜೊತೆಗೆ ಬಂದು ಸೇರಲಿ ಒಗ್ಗಟ್ಟಿನ ಹೋರಾಟಕ್ಕೆ ಸಹಕರಿಸಲಿ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಒಟ್ಟಾಗಿ ಹೋರಾಟ ನಡೆಸೋಣ ಎಂದು ನಾವು ಕರೆಯುತ್ತಿದ್ದೇವೆ. ಆದರೂ ಸಹಕರಿಸದಿದ್ದರೆ. ಏನು ಮಾಡಲು ಸಾಧ್ಯವಿಲ್ಲ. ವರಿಷ್ಠರು ಎಲ್ಲವನ್ನು ಗಮನಿಸುತ್ತಿದ್ದಾರೆ ನೋಡೋಣ ಎಂದು ಹೇಳಿದರು.

 

For Latest News Updates, Join Our Whatsapp Community🚩
RELATED ARTICLES

Most Popular