ಚಾಮರಾಜನಗರ: ಪಾದಯಾತ್ರೆ ಮೂಲಕವಾಗಿ ತೆರಳುತ್ತಿದ್ದ ಅಯ್ಯಪ್ಪ ಮಾಲಾಧಾರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದಿರುವ ಘಟನೆ ಚಾಮರಾಜನಗರ ಜಿಲ್ಲೆಯ ಮದ್ದೂರು ಬಳಿ ನಡೆದಿದೆ.
ಚಾಮರಾಜನಗರದ ಮದ್ದೂರು ಬಳಿಯ ಮೂಲೆ ಹೊಳೆ ಚೆಕ್ ಪೋಸ್ಟ್ ನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಡೆಯೊಡ್ಡಿದ್ದಾರೆ. ಮೂಲೆ ಹೊಳೆ ಚೆಕ್ ಪೋಸ್ಟ್ ಮೂಲಕ ತೆರಳಲು ಅಯ್ಯಪ್ಪ ಮಾಲಾಧಾರಿಗಳು ಯತ್ನಿಸಿದ್ದರು. ಆದರೆ ಕಾಡಾನೆ, ಚಿರತೆ ದಾಳಿ ಮಾಡುತ್ತವೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮಾಲಾಧಾರಿಗಳಿಗೆ ಪಾದಯಾತ್ರೆ ಮೂಲಕ ಹೋಗದಂತೆ ತಡೆದಿದ್ದಾರೆ.
ಮಾಲಾಧಾರಿಗಳು ಚೆಕ್ ಪೋಸ್ಟ್ ಬಳಿಯೇ ಧರಣಿ ಕುಳಿತಿದ್ದು, ನಾವು ಕಾಡಿನ ಒಳದಾರಿಯಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳುತ್ತೇವೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇದಕ್ಕೆ ಒಪ್ಪದ ಅರಣ್ಯ ಇಲಾಖೆ ಅಧಿಕಾರಿಗಳು ಕೇವಲ ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶವಿದೆ. ಕಾಡಿನ ದಾರಿಯಲ್ಲಿ ಆನೆ, ಚಿರತೆ ದಾಳಿಯಾಗುವ ಸಾಧ್ಯತೆಯಿರುವುದರಿಂದ ಪಾದಯಾತ್ರೆ ನಡೆಸದಂತೆ ತಿಳಿಸಿದ್ದಾರೆ.

