HomeIndiaಅಯೋಧ್ಯೆ ರಾಮ ಮಂದಿರಕ್ಕೆ ಬಂದ 4 ಕೋಟಿ ರೂ. ಚೆಕ್ ಬೌನ್ಸ್: ಖಾತೆಯಲ್ಲಿತ್ತು ಬರಿ 3...

ಅಯೋಧ್ಯೆ ರಾಮ ಮಂದಿರಕ್ಕೆ ಬಂದ 4 ಕೋಟಿ ರೂ. ಚೆಕ್ ಬೌನ್ಸ್: ಖಾತೆಯಲ್ಲಿತ್ತು ಬರಿ 3 ರೂಪಾಯಿ!

ಅಯೋಧ್ಯೆಯ ಭವ್ಯ ರಾಮಮಂದಿರದ ಸಿಬ್ಬಂದಿಯ ಸೌಲಭ್ಯಕ್ಕಾಗಿ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಚೆಕ್ ನೀಡಿದ್ದ ಮಹಿಳಾ ಭಕ್ತರೊಬ್ಬರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೆಕ್ ಬ್ಯಾಂಕ್ ಗೆ ಸಲ್ಲಿಕೆಯಾದಾಗ ಆ ಖಾತೆಯಲ್ಲಿ ಕೇವಲ ಮೂರು ರೂಪಾಯಿ ಇರುವುದು ಬೆಳಕಿಗೆ ಬಂದಿದ್ದು, ಚೆಕ್ ಬೌನ್ಸ್ ಆಗಿದೆ.

ಚೆನ್ನೈ ಮೂಲದ ಮಹಿಳಾ ಭಕ್ತೆಯೊಬ್ಬರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಈ ಬೃಹತ್ ಮೊತ್ತದ ಚೆಕ್ ನೀಡಿದ್ದರು. ಮಂದಿರದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಈ ಹಣವನ್ನು ಬಳಸಬೇಕು ಎಂದು ಅವರು ಕೋರಿದ್ದರು. ಅಷ್ಟೇ ಅಲ್ಲದೆ, ಈ ಹಣವನ್ನು ಬೇರೆ ಯಾವುದಕ್ಕೂ ಬಳಸದೆ ಕೇವಲ ಸಿಬ್ಬಂದಿ ಕಲ್ಯಾಣಕ್ಕಾಗಿಯೇ ವಿನಿಯೋಗಿಸಲಾಗುವುದು ಎಂದು ಟ್ರಸ್ಟ್‌ನಿಂದ ಲಿಖಿತ ಭರವಸೆಯನ್ನೂ ಕೇಳಿದ್ದರು. ಆದರೆ ಟ್ರಸ್ಟ್ ಅಂತಹ ಯಾವುದೇ ಲಿಖಿತ ಭರವಸೆ ನೀಡಿರಲಿಲ್ಲ.

ಇದಲ್ಲದೆ, ಈ ಮಹಿಳೆ 10,000 ರೂಪಾಯಿಗಳ ಮತ್ತೊಂದು ನಗದು ದೇಣಿಗೆಯನ್ನೂ ನೀಡಿದ್ದರು. ಆದರೆ 4 ಕೋಟಿ ರೂಪಾಯಿಯ ಚೆಕ್ ಅನ್ನು ಟ್ರಸ್ಟ್ ಬ್ಯಾಂಕ್‌ಗೆ ಜಮೆ ಮಾಡಿದಾಗ, ಖಾತೆಯಲ್ಲಿ ಅಗತ್ಯ ಹಣವಿಲ್ಲದೇ ಇರುವುದು ಕಂಡುಬಂದು ಚೆಕ್ ತಿರಸ್ಕೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಆ ಮಹಿಳೆಗೆ ನೋಟಿಸ್ ನೀಡಿ ಸ್ಪಷ್ಟನೆ ಕೇಳಲು ಮುಂದಾಗಿದ್ದಾರೆ. ಟ್ರಸ್ಟ್ ಕೂಡ ಈ ವಿಚಾರವನ್ನು ತಕ್ಷಣವೇ ದೊಡ್ಡದು ಮಾಡದೆ ಭಕ್ತೆಯೊಂದಿಗೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಯೋಧ್ಯೆ ರಾಮಮಂದಿರಕ್ಕೆ ಪ್ರತಿತಿಂಗಳು ಕೋಟ್ಯಂತರ ರೂಪಾಯಿ ದೇಣಿಗೆ ಹರಿದುಬರುತ್ತದೆ. ತಿಂಗಳಿಗೆ ಸರಿ ಸುಮಾರು ಮೂರರಿಂದ ನಾಲ್ಕು ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗುತ್ತಿದ್ದು, ಇದರಲ್ಲಿ ಚೆಕ್ ಮೂಲಕವೇ ಒಂದುವರೆ ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಬರುತ್ತದೆ. ಈ ಹಿಂದೆ ದೇಣಿಗೆ ಸಂಗ್ರಹ ಅಭಿಯಾನದ ವೇಳೆಯೂ ತಾಂತ್ರಿಕ ಕಾರಣಗಳಿಂದ ಹಲವು ಚೆಕ್‌ಗಳು ಬೌನ್ಸ್ ಆಗಿದ್ದವು. ಆದರೆ, ಸಣ್ಣ ಪ್ರಮಾಣದ ಹಣ ಇದ್ದ ಖಾತೆಯಿಂದ 4 ಕೋಟಿ ರೂಪಾಯಿಯ ದೊಡ್ಡ ಮೊತ್ತದ ಚೆಕ್ ನೀಡಿರುವುದು ಈಗ ತೀವ್ರ ಕುತೂಹಲ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular