HomeKarnatakaಅಯೋಧ್ಯೆಗೆ ತೆರಳುವವರಿಗೆ ಗುಡ್ ನ್ಯೂಸ್: ರಾಜ್ಯದಿಂದ 11 ವಿಶೇಷ ರೈಲು

ಅಯೋಧ್ಯೆಗೆ ತೆರಳುವವರಿಗೆ ಗುಡ್ ನ್ಯೂಸ್: ರಾಜ್ಯದಿಂದ 11 ವಿಶೇಷ ರೈಲು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ, ಬಾಲ ರಾಮನ ಮೂರ್ತಿ ದರ್ಶನ ಪಡೆಯಲು ರಾಜ್ಯದ ಭಕ್ತರಿಗೆ ಅನುಕೂಲವಾಗುವಂತೆ 11 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಲಿವೆ.

ಫೆಬ್ರವರಿಯಲ್ಲಿ ಸಂಚಾರ ಆರಂಭವಾಗಲಿದ್ದು, ಆನ್ಲೈನ್ ಬುಕಿಂಗ್ ಗೆ ಮಾತ್ರ ಅವಕಾಶ ಇರುತ್ತದೆ. ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ರೈಲು ಸೇವೆಯನ್ನು ದೇಶಾದ್ಯಂತ ಒದಗಿಸಲು ರೈಲ್ವೆ ಇಲಾಖೆ ಮುಂದಾಗಿದೆ. ರಾಜ್ಯದಿಂದ 11 ರೈಲುಗಳನ್ನು ಅಯೋಧ್ಯೆಗೆ ಬಿಡಲಾಗುವುದು. ಕರ್ನಾಟಕ -ಗೋವಾದಿಂದ ಎರಡು ರೈಲುಗಳು, ಕರ್ನಾಟಕದಿಂದ ಅಯೋಧ್ಯೆಗೆ ನೇರವಾಗಿ 9 ರೈಲುಗಳು ಸಂಚರಿಸಲಿವೆ.

ಈ ವಿಶೇಷ ರೈಲುಗಳಿಗೆ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ನೀಡುವುದಿಲ್ಲ. ಜನವರಿ 31ರ ನಂತರ ಐಆರ್‌ಸಿಟಿಸಿ ವೆಬ್ ಸೈಟ್ ನಲ್ಲಿ ಆನ್ಲೈನ್ ಮೂಲಕ ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಅಯೋಧ್ಯೆ ರೈಲು ನಿಲ್ದಾಣದಲ್ಲಿ ಎಷ್ಟು ರೈಲುಗಳ ನೆರಳು ಕಡೆಗೆ ಸಾಮರ್ಥ್ಯವಿದೆ ಎಂಬುದರ ಆಧಾರದ ಮೇಲೆ ಯಾವ ರಾಜ್ಯಗಳಿಂದ ಎಷ್ಟು ರೈಲುಗಳಿಗೆ ಅವಕಾಶ ಕಲ್ಪಿಸಬೇಕೆಂದು ಪರಿಶೀಲನೆ ನಡೆಸಲಾಗಿದೆ. ಕರ್ನಾಟಕದಿಂದ 11 ರೈಲುಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular