HomeLatest Newsಆಗಸ್ಟ್ 1 ರಿಂದ ವಾಹನ ಖರೀದಿದಾರರಿಗೆ ಶಾಕ್: ಕಾರು ಹಾಗೂ ಬೈಕ್ ಬೆಲೆ ಗಗನಕ್ಕೆ; ಎಷ್ಟು...

ಆಗಸ್ಟ್ 1 ರಿಂದ ವಾಹನ ಖರೀದಿದಾರರಿಗೆ ಶಾಕ್: ಕಾರು ಹಾಗೂ ಬೈಕ್ ಬೆಲೆ ಗಗನಕ್ಕೆ; ಎಷ್ಟು ಹೆಚ್ಚಳ? ಇಲ್ಲಿದೆ ಮಾಹಿತಿ

ನವದೆಹಲಿ- ನಿತ್ಯೋಪಯೋಗಿ ವಸ್ತುಗಳು ಹಾಗೂ ಇಂಧನ ದರ ಏರಿಕೆಯಿಂದ ಈಗಾಗಲೇ ಕಂಗೆಟ್ಟಿರುವ ಮಧ್ಯಮ ವರ್ಗದ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ.

ಮುಂಬರುವ ಆಗ್ರಸ್ಟ್ 1 ರಿಂದ ದೇಶದಲ್ಲಿ ಹೊಸ ಕಾರು, ಬೈಕ್ ಮತ್ತು ಇತರೆ ಮೋಟಾರು ವಾಹನಗಳ ಬೆಲೆ ತೀವ್ರವಾಗಿ ಹೆಚ್ಚಳವಾಗಲಿದೆ ಎಂದು ಪ್ರಮುಖ ವಾಹನ ತಯಾರಕ ಕಂಪನಿಗಳು ಅಧಿಕೃತವಾಗಿ ಘೋಷಿಸಿವೆ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ಪಾದನಾ ವೆಚ್ಚ ಏರಿಕೆಗೆ ಜಾಗತಿಕ ಕಾರಣಗಳು

ಜಾಗತಿಕ ಆರ್ಥಿಕ ತಲ್ಲಣಗಳು ಮತ್ತು ಯುದ್ಧಗಳ ಪ್ರಭಾವ ನೇರವಾಗಿ ಆಟೋಮೊಬೈಲ್ ರಂಗದ ಮೇಲೆ ಬೀರಿದೆ.ವಾಹನಗಳ ತಯಾರಿಕೆಗೆ ಅನಿವಾರ್ಯವಾಗಿರುವ ಉಕ್ಕು (Steel), ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್ ಹಾಗೂ ಎಲೆಕ್ಟ್ರಾನಿಕ್ ಚಿಪ್‌ಗಳ (Semiconductors) ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.

ಕೋವಿಡ್ ನಂತರದ ದಿನಗಳಲ್ಲಿ ವ್ಯತ್ಯಯಗೊಂಡ ಪೂರೈಕೆ ಸರಪಳಿ (Supply Chain), ರಷ್ಯಾ-ಉಕ್ರೇನ್ ಯುದ್ಧ ಹಾಗೂ ಇತ್ತೀಚಿನ ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಕಚ್ಚಾ ತೈಲ ಮತ್ತು ಲೋಹಗಳ ಬೆಲೆಯನ್ನು ಗಗನಕ್ಕೇರಿಸಿದೆ.ಈ ನಿರಂತರ ಉತ್ಪಾದನಾ ವೆಚ್ಚದ ಭ,ರೆಯನ್ನು ಗ್ರಾಹಕರ ಹೆಗಲಿಗೆ ಹಾಕಲು ಕಂಪನಿಗಳು ನಿರ್ಧರಿಸಿವೆ

ಸಾರಿಗೆ ವ್ಯವಸ್ಥೆ ಮೇಲೂ ಪರಿಣಾಮ

ಈ ಬೆಲೆ ಏರಿಕೆಯು ಕೇವಲ ಹೊಸ ವಾಹನ ಖರೀದಿದಾರರಿಗೆ ಮಾತ್ರ ಸೀಮಿತವಾಗಿಲ್ಲ; ಬದಲಿಗೆ ಇದು ಇಡೀ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ.ಹೊಸ ವಾಹನಗಳ ಖರೀದಿ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗುವುದರಿಂದ, ಟ್ರಾವೆಲ್ಸ್ ಏಜೆನ್ಸಿಗಳು ಮತ್ತು ಟ್ಯಾಕ್ಸಿ ಸೇವಾ ಕಂಪನಿಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಲಿದೆ.

ಈಗಾಗಲೇ ಜಾರಿಯಲ್ಲಿರುವ ದುಬಾರಿ ಇಂಧನ ದರ ಹಾಗೂ ಟೋಲ್ ಶುಲ್ಕಗಳೊಂದಿಗೆ ವಾಹನಗಳ ಬಿಡಿಭಾಗಗಳ ಬೆಲೆ ಏರಿಕೆಯೂ ಸೇರಿಕೊಂಡಿರುವುದರಿಂದ, ನಷ್ಟವನ್ನು ಸರಿದೂಗಿಸಲು ಪ್ರಯಾಣಿಕರ ಬಾಡಿಗೆ ದರವನ್ನು ಏರಿಕೆ ಮಾಡಲು ಕರ್ನಾಟಕ ಟ್ರಾವೆಲ್ಸ್ ಅಸೋಸಿಯೇಷನ್ ಗಂಭೀರ ಚಿಂತನೆ ನಡೆಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಟ್ಯಾಕ್ಸಿ ಹಾಗೂ ಬಾಡಿಗೆ ವಾಹನಗಳ ಪ್ರಯಾಣ ಮತ್ತಷ್ಟು ದುಬಾರಿಯಾಗಲಿದೆ.

ಜುಲೈ 31 ರೊಳಗೆ ಖರೀದಿಸುವುದೇ ಲಾಭದಾಯಕ

ಬೆಲೆ ಏರಿಕೆಯ ಬಿಸಿ ಮುಟ್ಟುವುದಕ್ಕಿಂತ ಮುಂಚಿತವಾಗಿ ಅಂದರೆ, ಜುಲೈ 31 ರೊಳಗೆ ವಾಹನ ಖರೀದಿ ಮಾಡುವುದು ಹೆಚ್ಚು ಲಾಭದಾಯಕ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಗಸ್ಟ್ 1 ರಿಂದ ಹೊಸ ದರಗಳು ಜಾರಿಗೆ ಬಂದ ಬಳಿಕ ವಾಹನದ ವಿಧಕ್ಕನುಗುಣವಾಗಿ ₹5,000 ದಿಂದ ₹50,000 ವರೆಗೆ ಹೆಚ್ಚು ಹಣ ತೆರಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ, ಹೊಸ ಕಾರು ಅಥವಾ ಬೈಕ್ ಖರೀದಿಸುವ ಯೋಚನೆಯಲ್ಲಿರುವ ಗ್ರಾಹಕರು ಕೂಡಲೇ ಮುಂಗಡ ಕಾಯ್ದಿರಿಸುವುದು ಅಥವಾ ಸದ್ಯ ಡೀಲರ್‌ಗಳು ಹಳೆಯ ಸ್ಟಾಕ್‌ ಮೇಲೆ ನೀಡುತ್ತಿರುವ ಆಕರ್ಷಕ ರಿಯಾಯಿತಿಗಳ ಸದುಪಯೋಗ ಪಡೆದುಕೊಳ್ಳುವುದು ಉತ್ತಮ ನಿರ್ಧಾರವಾಗಿದೆ.

ವಾಹನ ವರ್ಗವಾರು ಬೆಲೆ ಏರಿಕೆ ವಿವರ

ವಾಹನ ವರ್ಗ -ಪ್ರಮುಖ ಕಂಪನಿಗಳು- ಅಂದಾಜು ಬೆಲೆ ಏರಿಕೆ

ಕಾರುಗಳು – ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮಹೀಂದ್ರಾ, ಕಿಯಾ, ಹೋಂಡಾ, ಟೊಯೋಟಾ

1% ರಿಂದ 3%

ದ್ವಿಚಕ್ರ ವಾಹನಗಳು- ಹೀರೋ ಮೋಟೋಕಾ ರ್ಪ್, ಹೋಂಡಾ, ಬಜಾಜ್, ಟಿವಿಎಸ್, ರಾಯಲ್ ಎನ್ಫೀಲ್ಡ್.

1.5% ರಿಂದ 2.5%

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular