HomeKarnataka Big News: ಬೆಂಗಳೂರಿನ ಆಟೋ ಚಾಲಕರಿಗೆ ಬಿಗ್ ಶಾಕ್!

 Big News: ಬೆಂಗಳೂರಿನ ಆಟೋ ಚಾಲಕರಿಗೆ ಬಿಗ್ ಶಾಕ್!

ಕರ್ನಾಟಕ ಸರ್ಕಾರ ಬೆಂಗಳೂರು ನಗರದ ಆಟೋ ಚಾಲಕರಿಗೆ ಬಿಗ್ ಶಾಕ್ ನೀಡಿದೆ. ಆಟೋ ಚಾಲಕರು 15 ವರ್ಷಕ್ಕಿಂತ ಹಳೆಯದಾದ ಆಟೋರಿಕ್ಷಾಗಳ ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ಮತ್ತು ತಪಾಸಣೆ ಶುಲ್ಕದಲ್ಲಿನ ಭಾರಿ ಏರಿಕೆ ಮಾಡಿರುವ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಟೋ ಚಾಲಕರ ಪ್ರಕಾರ ಈ ಶುಲ್ಕವು ಹಿಂದೆ 1,000 ರೂ. ಇತ್ತು. ಈಗ ಅದು 9,200 ರೂ.ಗೆ ಏರಿಕೆಯಾಗಿದೆ. ಈ ಶುಲ್ಕ ಏರಿಕೆ ಮಾಡುವ ಮೊದಲು ತಮ್ಮನ್ನು ಸಂಪರ್ಕಿಸಿಲ್ಲ ಅಥವಾ ಮುಂಚಿತವಾಗಿ ಚಾಲಕರಿಗೆ ಮಾಹಿತಿಯನ್ನು ನೀಡಿಲ್ಲ ಎಂದು ಚಾಲಕರು ಆರೋಪ ಮಾಡಿದ್ದಾರೆ.

ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಉಲ್ಲೇಖಿಸಿ ಏರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಪರಿಷ್ಕರಣೆಯನ್ನು ಅಧಿಕೃತವಾಗಿ ಅಧಿಸೂಚನೆ ಮೂಲಕ ತಿಳಿಸಿಲ್ಲ. ಜಾರಿಗೆ ತರುವ ಮುನ್ನ ಆಕ್ಷೇಪಣೆಗಳನ್ನು ಆಹ್ವಾನಿಸಿಲ್ಲ ಎಂದು ಆಟೋ ಚಾಲಕರು ದೂರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

22 ವರ್ಷಗಳಿಂದ ಆಟೋ ಮಾಲೀಕ ಮತ್ತು ಚಾಲಕನಾಗಿದ್ದೇನೆ. 20 ವರ್ಷ ದಾಟಿದ ತಮ್ಮ ಆಟೋಗೆ ಎಫ್‌ಸಿ ನವೀಕರಿಸಲು ಇತ್ತೀಚೆಗೆ 9,200 ರೂ. ಪಾವತಿಸಿದ್ದೇನೆ ಎಂದು ಆಟೋ ಚಾಲಕ ಚಂದ್ರೇಗೌಡ ಹೇಳಿದ್ದಾರೆ.

“ಕಳೆದ ವರ್ಷ ನಾನು ಕೇವಲ 1,000 ರೂ. ಪಾವತಿಸಿದ್ದೆ. ಈ ವರ್ಷ ಶುಲ್ಕವನ್ನು 9,200 ರೂ.ಗೆ ಏರಿಕೆ ಮಾಡಲಾಗಿದೆ. ಮಾರ್ಚ್‌ನಲ್ಲಿ ಎಫ್‌ಸಿ ಪಡೆಯಬೇಕಿತ್ತು. ಆದರೆ ಅದಕ್ಕೂ ಮೊದಲು ಎಫ್‌ಸಿ ಪರೀಕ್ಷೆ ಮಾಡಿಸಿದಾಗ ಇಷ್ಟು ಹಣ ಕಟ್ಟಿಸಿಕೊಂಡಿದ್ದಾರೆ” ಎಂದು ಚಂದ್ರೇಗೌಡ ತಿಳಿಸಿದ್ದಾರೆ.

ಚಾಲಕರ ಆಕ್ರೋಶ: ಎಫ್‌ಸಿ ಶುಲ್ಕ ಏರಿಕೆ ಬಗ್ಗೆ ಹಲವಾರು ಚಾಲಕರು ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ. 1990ರಿಂದ ಆಟೋ ಓಡಿಸುತ್ತಿದ್ದೇವೆ. ನಮಗೆ ಹೊಸ ವಾಹನ ಖರೀದಿಸುವುದು ಸುಲಭವಲ್ಲ. ಹಿರಿಯ ಚಾಲಕರಿಗೆ ಸಾಲ ನೀಡಲು ಬ್ಯಾಂಕ್‌ಗಳು ಹಿಂಜರಿಯುತ್ತವೆ. ಹೀಗಿರುವಾಗ ಎಫ್‌ಸಿ ಪಡೆಯಲು ಇಷ್ಟು ದರ ನಿಗದಿ ಮಾಡಿದರೆ ಹೇಗೆ? ಎಂದು ಚಾಲಕರು ಪ್ರಶ್ನೆ ಮಾಡಿದ್ದಾರೆ.

ದುಬಾರಿಯಾದ ಎಫ್‌ಸಿ ಶುಲ್ಕವನ್ನು ಪಾವತಿಸಬೇಕೋ ಅಥವಾ ಕಡಿಮೆ ಖರ್ಚಿನಲ್ಲಿ ಹೊಸ ಆಟೋ ಖರೀದಿಸಬೇಕೋ? ಎಂದು ಚಾಲಕರು ಗೊಂದಲಕ್ಕೆ ಸಿಲುಕಿದ್ದಾರೆ. ಸರ್ಕಾರದ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2004ರ ಮಾದರಿಯ ಆಟೋವನ್ನು ಈಗ ಎಲೆಕ್ಟ್ರಿಕ್ ವಾಹನವಾಗಿ ಬದಲಾವಣೆ ಮಾಡಲಾಗಿದೆ. ಅದರ ಎಫ್‌ಸಿ ನವೀಕರಣಕ್ಕೆ ತಮ್ಮಿಂದಲೂ 9,200 ರೂ. ವಸೂಲಿ ಮಾಡಲಾಗಿದೆ ಎಂದು ದೂರಿದ್ದಾರೆ. ಕಳೆದ ವರ್ಷದವರೆಗೆ ಅವರು 600 ರೂ. ಜೊತೆಗೆ ಇವಿ ಪರಿವರ್ತನೆಗಾಗಿ 200 ರೂ., ಅಂದರೆ ಒಟ್ಟು 800 ರೂ. ಮಾತ್ರ ಪಾವತಿಸುತ್ತಿದ್ದರು. ಈ ಬಾರಿ ಏಕೆ ಶುಲ್ಕ ಏರಿಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಮಾತನಾಡಿ, “ಈ ಶುಲ್ಕ ಏರಿಕೆಯು ಅತಿಯಾಗಿದೆ ಮತ್ತು ಅದನ್ನು ಹಠಾತ್ತಾಗಿ ಜಾರಿಗೆ ತರಲಾಗಿದೆ” ಎಂದು ಆರೋಪಿಸಿರು.

“ಹೊಸ ವಾಹನಗಳ ತಪಾಸಣೆ ಶುಲ್ಕವನ್ನು 600 ರೂ.ನಿಂದ 800 ರೂ.ಗೆ ಏರಿಸಲಾಗಿದೆ ಮತ್ತು ಎಂಟು ವರ್ಷಗಳ ನಂತರ 800 ರೂ.ನಿಂದ 1,000 ರೂ.ಗೆ ಹೆಚ್ಚಿಸಲಾಗಿದೆ. 15 ವರ್ಷ ಪೂರೈಸಿದ ವಾಹನಗಳಿಗೆ ಈಗ ಸುಮಾರು 4,500 ರೂ. ಮತ್ತು 20 ವರ್ಷ ದಾಟಿದ ವಾಹನಗಳಿಗೆ 9,200 ರೂ.ಗಳನ್ನು ವಿಧಿಸಲಾಗುತ್ತಿದೆ” ಎಂದು ಅವರು ವಿವರಣೆ ನೀಡಿದರು.

ಅಧಿಕಾರಿಗಳು ಇಂತಹ ಯಾವುದೇ ಬದಲಾವಣೆಯನ್ನು ತರುವ ಮೊದಲು ಅಧಿಕೃತವಾಗಿ ಅಧಿಸೂಚನೆ ಹೊರಡಿಸಬೇಕು ಮತ್ತು ಜಾರಿಗೆ ತರುವ ಮುನ್ನ ಸಾರ್ವಜನಿಕರ ಆಕ್ಷೇಪಣೆಗಳನ್ನು ಆಹ್ವಾನಿಸಬೇಕು. ಆದರೆ ಜನರ ಆಕ್ಷೇಪಣೆಗಳನ್ನು ಆಹ್ವಾನಿಸಿದೇ ದರ ಏರಿಕೆ ಮಾಡಲಾಗಿದೆ ಎಂಬುದು ಆರೋಪವಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular