HomeKarnatakaಬೈಕ್ ಟ್ಯಾಕ್ಸಿಗೆ ಒಪ್ಪಿಗೆ: ಸರ್ಕಾರಕ್ಕೆ ತಲೆನೋವಾದ ಆಟೋ ಚಾಲಕರ ಬೇಡಿಕೆ!

ಬೈಕ್ ಟ್ಯಾಕ್ಸಿಗೆ ಒಪ್ಪಿಗೆ: ಸರ್ಕಾರಕ್ಕೆ ತಲೆನೋವಾದ ಆಟೋ ಚಾಲಕರ ಬೇಡಿಕೆ!

ಹಲವು ದಿನಗಳ ಕಾನೂನು ಹೋರಾಟದ ಬಳಿಕ ಕರ್ನಾಟಕದಲ್ಲಿ ಉಬರ್, ರ‍್ಯಾಪಿಡೋ ಸೇರಿದಂತೆ ವಿವಿಧ ಕಂಪನಿಗಳ ಬೈಕ್ ಟ್ಯಾಕ್ಸಿ ಸೇವೆಗೆ ಹೈಕೋರ್ಟ್ ಒಪ್ಪಿಗೆ ನೀಡಿದೆ. ಇಷ್ಟು ದಿನ ಬೈಕ್ ಟ್ಯಾಕ್ಸಿ ಬೇಡ ಎನ್ನುತ್ತಿದ್ದ ಆಟೋ ಚಾಲಕರಿಗೆ ಮುಖಭಂಗವಾಗಿದೆ. ಆದರೆ ಈಗ ಚಾಲಕರು ಸರ್ಕಾರದ ಮುಂದೆ ಹೊಸ ಬೇಡಿಕೆ ಇಟ್ಟಿದ್ದಾರೆ.

ಕರೆದಲ್ಲಿಗೆ ಬರದ, ಸಂಚಾರಿ ನಿಯಮ ಉಲ್ಲಂಘಿಸಿ ಓಡಿಸುವ, ಬಾಯಿಗೆ ಬಂದಷ್ಟು ದರ ಹೇಳುವ ಆಟೋ ಚಾಲಕರ ದುಡಿಮೆಗೆ ಬೈಕ್ ಟ್ಯಾಕ್ಸಿ ಸೇವೆ ಪೆಟ್ಟು ನೀಡಿದೆ. ಬೆಂಗಳೂರು ನಗರದಲ್ಲಿ ಬೈಕ್ ಟ್ಯಾಕ್ಸಿ ಓಡಿಸುವವರನ್ನು ತಡೆದು ಗೂಂಡಾಗಿರಿ ಮಾಡುತ್ತಿದ್ದ ಆಟೋ ಚಾಲಕರಿಗೆ ಕರ್ನಾಟಕ ಹೈಕೋರ್ಟ್‌ ಆದೇಶ ಭಾರೀ ಹಿನ್ನಡೆ ಮಾಡಿದೆ.

ಸಾರಿಗೆ ಇಲಾಖೆ ಕೆಲವು ದಿನ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ ಆದೇಶಿಸಿತ್ತು. ಜನರು ಸಹ ಇದಕ್ಕೆ ತೀವ್ರ ವಿರೋಧ ತೋರಿಸಿದ್ದರು. ಅಂತಿಮವಾಗಿ ಕಂಪನಿಗಳ ಕಾನೂನು ಹೋರಾಟದ ಬಳಿಕ ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿಗೆ ಒಪ್ಪಿಗೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಟೋ ಚಾಲಕರ ಬೇಡಿಕೆಗಳು: ಇಷ್ಟು ದಿನ ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಿ ಎಂದು ಕೂಗಾಡುತ್ತಿದ್ದ ಆಟೋ ಚಾಲಕರು ಈಗ ಸೈಲೆಂಟ್ ಆಗಿದ್ದಾರೆ. ಅಲ್ಲದೇ ಸರ್ಕಾರದ ಮುಂದೆ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಇದು ಸರ್ಕಾರಕ್ಕೆ ತಲೆ ನೋವಾಗಿದ್ದು, ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕಿದೆ.

ಬೆಂಗಳೂರಿನಂತಹ ನಗರದಲ್ಲಿ ಆಟೋದವರ ದುಪ್ಪಟ್ಟು ದರಕ್ಕಿಂತ ಬೈಕ್ ಟ್ಯಾಕ್ಸಿ ಸೇವೆ ಉತ್ತಮವಾಗಿದೆ. ಆಟೋ ಚಾಲಕರ ಮಾದರಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮಾಡುವವರು ಗೂಂಡಾಗಿರಿ ಮಾಡುವುದಿಲ್ಲ, ರಸ್ತೆಯಲ್ಲಿ ಗಲಾಟೆ ಮಾಡಿ ಹೊಡೆದಾಟಕ್ಕೆ ನಿಲ್ಲುವುದಿಲ್ಲ.

ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿ ಸೇವೆಗೆ ಅನುಮೋದನೆ ನೀಡಿದ ಬಳಿಕ ಆಟೋ ಚಾಲಕರು ಇದಕ್ಕೆ ಒಂದು ಕಾನೂನು ರೂಪಿಸಿ ಎಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಶೀಘ್ರವೇ ಸಾರಿಗೆ ಸಚಿವರನ್ನು ಭೇಟಿ ಮಾಡಲು ಸಹ ಮುಂದಾಗಿದ್ದಾರೆ.

  • ಯೆಲ್ಲೋ ಬೋರ್ಡ್ ಕಡ್ಡಾಯ ಮಾಡಿ: ಆಟೋ ಚಾಲಕರ ಮೊದಲ ಬೇಡಿಕೆ ಯೆಲ್ಲೋ ಬೋರ್ಡ್ ಕಡ್ಡಾಯ ಮಾಡಿ ಎಂಬುದು. ಈಗ ಬೈಕ್ ಟ್ಯಾಕ್ಸಿ ಸೇವೆಗೆ ಬೋರ್ಡ್ ಕಡ್ಡಾಯವಿಲ್ಲ. ವೈಟ್ ಬೋರ್ಡ್ ಹೊಂದಿರುವ ಅನೇಕರು ಬೈಕ್ ಟ್ಯಾಕ್ಸಿ ಓಡಿಸುತ್ತಾರೆ. ಆದರೆ ಬೈಕ್ ಟ್ಯಾಕ್ಸಿ ಮಾಡುವವರು ಕಡ್ಡಾಯವಾಗಿ ಯೆಲ್ಲೋ ಬೋರ್ಡ್ ಹಾಕಿಕೊಳ್ಳಬೇಕು ಎಂದು ಕಾನೂನು ರೂಪಿಸಿ ಎಂಬುದು ಬೇಡಿಕೆಯಾಗಿದೆ.
  • ಬೈಕ್ ಟ್ಯಾಕ್ಸಿಗೆ ಕಲರ್ ಕೋಡ್; ಸಾಮಾನ್ಯ ಬೈಕ್‌ಗಳಿಗೂ ಬೈಕ್ ಟ್ಯಾಕ್ಸಿ ಬೈಕ್‌ಗಳಿಗೂ ವ್ಯತ್ಯಾಸ ಗೊತ್ತಾಗುವುದಿಲ್ಲ. ಆದ್ದರಿಂದ ಬೈಕ್ ಟ್ಯಾಕ್ಸಿಗೆ ಉಪಯೋಗ ಮಾಡುವ ಬೈಕ್‌ಗಳಿಗೆ ಕಲರ್ ಕೋಡ್ ಜಾರಿಗೆ ತನ್ನಿ. ಇದರಿಂದಾಗಿ ಬೈಕ್ ಟ್ಯಾಕ್ಸಿಯನ್ನು ಸುಲಭವಾಗಿ ಗುರುತಿಸಬಹುದು. ಖಾಸಗಿ ಬೈಕ್‌ನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮಾಡುವುದು ತಡೆಯಬಹುದು ಎಂಬುದು ಆಟೋ ಚಾಲಕರ ಪಟ್ಟು.
  • ಯೂನಿಫಾರಂ ಕಡ್ಡಾಯ: ಆಟೋ ಚಾಲಕರೇ ಯೂನಿಫಾರಂ ಹಾಕದೇ ಆಟೋ ಓಡಿಸುತ್ತಾರೆ. ಅಂತಹದ್ದರಲ್ಲಿ ಬೈಕ್ ಟ್ಯಾಕ್ಸಿ ಓಡಿಸುವವರಿಗೆ ಯೂನಿಫಾರಂ, ಹೆಲ್ಮೆಟ್ ಕಡ್ಡಾಯ ಮಾಡಿ ಎಂದು ಆಟೋ ಚಾಲಕರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಪ್ರತಿದಿನ ಯೂನಿಫಾರಂ ಹಾಕದೇ ಆಟೋ ಓಡಿಸುವ ಆಟೋಗಳನ್ನು ಹಿಡಿದರೆ ಸರ್ಕಾರಕ್ಕೆ ಸಾವಿರಾರು ರೂಪಾಯಿ ಆದಾಯ ಸಂಗ್ರಹವಾಗುತ್ತದೆ.
  • ಬೈಕ್ ಟ್ಯಾಕ್ಸಿಗೆ ವಾಣಿಜ್ಯ ತೆರಿಗೆ ವಿಧಿಸಬೇಕು ಎಂಬುದು ಆಟೋ ಚಾಲಕರ ಬೇಡಿಕೆಯಾಗಿದೆ. ಈಗಾಗಲೇ ಇತರ ವಾಣಿಜ್ಯ ವಾಹನಗಳಿಗೆ ವಿಧಿಸುವ ಮಾದರಿಯಲ್ಲಿ ಬೈಕ್ ಟ್ಯಾಕ್ಸಿಗೆ ತೆರಿಗೆ ಹಾಕಬೇಕು. ಈ ಮಾದರಿ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular