HomeKarnatakaBREAKING NEWS: ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ; ನೋಡ ನೋಡುತ್ತಿದಿಂದಂತೆಯೇ ಕುಸಿದು ಬಿದ್ದು ಸಾವು

BREAKING NEWS: ಆಟೋ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘಾತ; ನೋಡ ನೋಡುತ್ತಿದಿಂದಂತೆಯೇ ಕುಸಿದು ಬಿದ್ದು ಸಾವು


ಬೆಂಗಳೂರು: ಆಟೋ ಚಲಾಯಿಸುತ್ತಿದ್ದಗಲೇ ಆಟೋ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ನಡೆದಿದೆ.

53 ವರ್ಷದ ತಿಮ್ಮೇಶ್ ಮೃತ ಆಟೋ ಚಾಲಕ. ಆಟೋ ಚಲಾಯಿಸಿಕೊಂಡು ಬಂದ ಆಟೋ ಚಾಲಕ ಸಂಪಂಗಿರಾಮನಗರದಲ್ಲಿ ಚಾಮುಂಡಿ ಟೀ ಅಂಗಡಿ ಬಳಿ ಟೀ ಕುಡಿಯಲೆಂದು ಆಟೋ ನಿಲ್ಲಿಸಿದ್ದಾರೆ. ಆಟೋ ನಿಲ್ಲಿಸಿ ಇನ್ನೇನು ಆಟೋದಿಂದ ಇಳಿಯಬೇಕು ಎನ್ನುವಷ್ಟರಲ್ಲಿ ಚಾಲಕನಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.

ಎದೆ ಉಜ್ಜುತ್ತಲೇ ಆಟೋದಿಂದ ಇಳಿದ ಚಾಲಕ, ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಆಟೋ ಚಾಲಕ ಕೊನೆಯುಸಿರೆಳೆದಿದ್ದಾರೆ. ಕೆಲ ಗಂಟೆಗಳ ಹಿಂದೆ ನಡೆದ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular