ಆಟೋ ಚಾಲಕ ಕೇಳಿದ ಹೆಚ್ಚುವರಿ ದರವನ್ನು ನೀಡಲು ನಿರಾಕರಿಸಿದ ಟೆಕ್ಕಿ ಓರ್ವನನ್ನು ಚಾಲಕ ಗುದ್ದಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ ಒಂದರಲ್ಲಿ ಗುರುವಾರ ಬೆಳಗಿನ ಜಾವ 3.30ಕ್ಕೆ ಈ ಘಟನೆ ನಡೆದಿದೆ. ಈ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟೆಕ್ಕಿ ಆಟೋದಲ್ಲಿ ಹೋಗಲು ನಿರ್ಧರಿಸಿದಾಗ ಹೆಚ್ಚುವರಿ ದರವನ್ನು ಚಾಲಕ ಕೇಳಿದ್ದಾನೆ. ಇದರಿಂದ ಟೆಕ್ಕಿ ವಾದ ಮಾಡಿ ಬರುವುದಿಲ್ಲ ಎಂದು ಹೇಳಿ ರಾಪಿಡೋ ಬೈಕ್ ಬುಕ್ ಮಾಡಲು ನಿರ್ಧರಿಸಿದ್ದರು.
ಬೈಕ್ ಬುಕ್ ಮಾಡಿ ಅದಕ್ಕೆ ಕಾಯುತ್ತಿದ್ದ ವೇಳೆ ಚಾಲಕ ಟೆಕ್ಕಿ ಅವರನ್ನು ಗುದ್ದಿರುವುದನ್ನು ಸಿಸಿ ಟಿವಿಯಲ್ಲಿ ನೋಡಬಹುದು. ಈ ವೇಗಕ್ಕೆ ಟೆಕ್ಕಿ ಅಲ್ಲಿಯೇ ಬಿದ್ದಿರುವುದನ್ನು ಕಾಣಬಹುದು. ಆಟೋ ಚಾಲಕ ಪರಾರಿಯಾಗಿದ್ದು, ಸಿಸಿ ಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಪೊಲೀಸರು ಆಟೋ ಚಾಲಕನಿಗಾಗಿ ಶೋಧ ನಡೆಸಿದ್ದಾರೆ.
https://twitter.com/AzharKhan144122/status/1661320415950811136?ref_src=twsrc%5Etfw%7Ctwcamp%5Etweetembed%7Ctwterm%5E1661320415950811136%7Ctwgr%5E046cc97767a3680a4f2cf146bbdeb86efe07056c%7Ctwcon%5Es1_&ref_url=https%3A%2F%2Fwww.freepressjournal.in%2Findia%2Fbengaluru-auto-driver-bangs-into-techie-who-turned-him-down-for-rapido-ride-watch