HomeKarnatakaBIG NEWS: ಆಟೋ-ಬಸ್ ಭೀಕರ ಅಪಘಾತ: ಇಬ್ಬರು ಯುವಕರು ದುರ್ಮರಣ

BIG NEWS: ಆಟೋ-ಬಸ್ ಭೀಕರ ಅಪಘಾತ: ಇಬ್ಬರು ಯುವಕರು ದುರ್ಮರಣ

ಚಿಕ್ಕಮಗಳೂರು: ನಿಂತಿದ್ದ ಅಟೋಗೆ ಬಸ್ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ನಗರದ ತೇಗೂರು ಸರ್ಕಲ್ ಬಳಿ ನಡೆದಿದೆ.

ನಲ್ಲೂರು ಗ್ರಾಮದ ರಘು, ಮಲ್ಲೆದೇವರಹಳ್ಳಿ ಗ್ರಾಮದ ಯುವಕ ಮೃತ ದುರ್ದೈವಿಗಳು. ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.

ಅಪಘಾತದ ರಭಸಕ್ಕೆ ಪಕ್ಕದಲ್ಲಿಯೇ ಇದ್ದ ಹೂವಿನ ಅಂಗಡಿ ಸಂಪೂರ್ಣ ಜಖಂಗೊಂಡಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular