HomeIndiaBIG NEWS: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಹೋದರಿ ವಿಧಿವಶ

BIG NEWS: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಹೋದರಿ ವಿಧಿವಶ

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ ಗೀತಾ ಮೆಹತಾ ವಿಧಿವಶರಾಗಿದ್ದಾರೆ. ಖ್ಯಾತ ಲೇಖಕಿಯೂ ಆಗಿದ್ದ 80 ವರ್ಷದ ಅವರು ವಯೋಸಹಜ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ.

ಬಿಜು ಪಟ್ನಾಯಕ್ ಹಾಗೂ ಗ್ಯಾನ್ ಪಟ್ನಾಯಕ್ ಅವರ ಪುತ್ರಿಯಾಗಿ 1943ರಲ್ಲಿ ಜನಿಸಿದ್ದ ಗೀತಾ ಮೆಹತಾ ಯುನೈಟೆಡ್ ಕಿಂಗ್ಡಮ್ ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ಮಾಕೋಲ, ಸ್ನೇಕ್ ಅಂಡ್ ಲಾಡರ್, ರಿವರ್ ಸೂತ್ರ, ದಿ ಎಟರ್ನಲ್ ಗಣೇಶ ಸೇರಿದಂತೆ ಹಲವು ಕೃತಿಗಳನ್ನು ಗೀತಾ ಮೆಹತಾ ಅವರು ಬರೆದಿದ್ದು, ಪ್ರಶಸ್ತಿಗಳಿಗೂ ಭಾಜನರಾಗಿದ್ದರು. ನವೀನ್ ಪಟ್ನಾಯಕ್ ಅವರ ಅಚ್ಚುಮೆಚ್ಚಿನ ಹಿರಿಯ ಸಹೋದರಿಯಾಗಿದ್ದ ಅವರು, ಒಡಿಶಾ ಜನತೆಯ ಅಭಿವೃದ್ಧಿಗೆ ತಮ್ಮ ಸಹೋದರ ಮಾಡಿದ ಕಾರ್ಯಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular