HomeInternationalಮಾಲ್‌ ನಲ್ಲಿ ಈತ ಮಾಡಿದ ಕೆಲಸ ಕಂಡು ಹೌಹಾರಿದ ಜನ....!

ಮಾಲ್‌ ನಲ್ಲಿ ಈತ ಮಾಡಿದ ಕೆಲಸ ಕಂಡು ಹೌಹಾರಿದ ಜನ….!

ಹಸಿ ಚಿಕನ್‌‌ ತಿನ್ನುತ್ತಿದ್ದ ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಡಿಲೇಡ್‌ನ ಶಾಪಿಂಗ್ ಮಾಲ್‌ ಒಂದರಲ್ಲಿ ಚಿಕನ್‌ನ ತೊಡೆಯ ತುಂಡುಗಳನ್ನು ಹಸಿಯಾಗಿಯೇ ತಿನ್ನುತ್ತಿರುವ ಈತನನ್ನು ಕಂಡು ನೆಟ್ಟಿಗರು ಹೌಹಾರಿದ್ದಾರೆ.

ಅಡಿಲೇಡ್‌‌ನ ಓಕ್‌ಲ್ಯಾಂಡ್ಸ್‌ ಪಾರ್ಕ್ನಲ್ಲಿರುವ ವೆಸ್ಟ್‌ಫೀಲ್ಡ್‌ ಮಾರಿಯಾನ್‌ ಮಾಲ್‌ನ ಎಸ್ಕಲೇಟರ್‌ ಒಂದರಲ್ಲಿ ಹೀಗೆ ಚಿಕನ್ ತಿನ್ನುತ್ತಾ ಸಾಗಿರುವ ಈತನ ಚಿತ್ರಗಳು ಕ್ಷಣಾರ್ಧದಲ್ಲಿ ನೆಟ್‌ನಲ್ಲಿ ವೈರಲ್ ಆಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಹಸಿ ಚಿಕನ್ ಸೇವನೆಯಿಂದ ಆರೋಗ್ಯದ ಮೇಲೆ ಅದೆಂಥ ಕೆಟ್ಟ ಪರಿಣಾಮ ಆಗಬಹುದು ಎಂದು ನೆಟ್ಟಿಗರು ಕಾಮೆಂಟ್‌ಗಳಲ್ಲಿ ಪ್ರಶ್ನಿಸಿದ್ದಾರೆ.

“ಈ ಮಹಾಶಯನಿಗೆ ಆರಾಮವಾಗಿ ಕುಳಿತು ತಿನ್ನಲಾಗಲೀ, ಪಾದರಕ್ಷೆ ಹಾಕಲಾಗಲೀ, ಅಥವಾ ಆಹಾರವನ್ನು ಬೇಯಿಸುವುದಕ್ಕಾಗಲೀ ಸಮಯವಿಲ್ಲದಷ್ಟು ಬ್ಯುಸಿ,” ಎಂದು ನೆಟ್ಟಿಗರೊಬ್ಬರು ಕಾಮಿಡಿಯಾಗಿ ಕಾಮೆಂಟ್ ಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular