ನವದೆಹಲಿ: 4 ಮೀಟರ್‌ಗಿಂತ ಕಡಿಮೆ ಉದ್ದದ ಕಾಂಪ್ಯಾಕ್ಟ್ SUVಗಳಿಗೆ ದೇಶದಲ್ಲಿ ಭಾರೀ ಬೇಡಿಕೆ ಮುಂದುವರಿದಿದೆ. ಆಗಸ್ಟ್ 2026ರ ಮಾರಾಟದಲ್ಲಿ ಟಾಟಾ ಪಂಚ್ ಮತ್ತು ಪಂಚ್ EV ಒಟ್ಟಾಗಿ 21,320 ಯುನಿಟ್ ಮಾರಾಟದೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದು, ಮಾರುತಿ ಫ್ರಾಂಕ್ಸ್ ಹಾಗೂ ಟಾಟಾ ನೆಕ್ಸಾನ್ ನಂತರದ ಸ್ಥಾನಗಳಲ್ಲಿವೆ.
ಹೌದು. ಕಳೆದ ಆಗಸ್ಟ್ ತಿಂಗಳಲ್ಲಿ 4 ಮೀಟರ್‌ಗಿಂತ ಕಡಿಮೆ ಉದ್ದದ ಎಸ್‌ಯುವಿಗಳಿಗೆ ದೇಶಾದ್ಯಂತ ಕಾರು ಖರೀದಿದಾರರಿಂದ ಭಾರೀ ಬೇಡಿಕೆ ವ್ಯಕ್ತವಾಗಿದೆ. ಕಳೆದ ತಿಂಗಳು Tata Punch ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡುವ ಮೂಲಕ ಮೊದಲ ಸ್ಥಾನ ಪಡೆದುಕೊಂಡಿದೆ. Maruti Suzuki Fronx ಎರಡನೇ ಸ್ಥಾನದಲ್ಲಿದ್ದರೆ, Tata Nexon ಮೂರನೇ ಸ್ಥಾನದಲ್ಲಿದೆ.₹10 ಲಕ್ಷದೊಳಗಿನ ಬಜೆಟ್‌ನಲ್ಲಿ ಉತ್ತಮ ಲುಕ್, ಫೀಚರ್‌ಗಳು ಹಾಗೂ ಶಕ್ತಿಶಾಲಿ ಎಸ್‌ಯುವಿ ಖರೀದಿಸಲು ಬಯಸುವವರಲ್ಲಿ ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಸಬ್-4 ಮೀಟರ್ ಎಸ್‌ಯುವಿಗಳ ಮಾರಾಟ ಶೇ.40.88ರಷ್ಟು ಏರಿಕೆ
ಭಾರತದಲ್ಲಿ ಎಸ್‌ಯುವಿ ಖರೀದಿಸುವವರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಅದರಲ್ಲೂ 3.8ರಿಂದ 4 ಮೀಟರ್ ಉದ್ದದ ಕಾಂಪ್ಯಾಕ್ಟ್ ಎಸ್‌ಯುವಿಗಳ ಬೇಡಿಕೆ ನಿರಂತರವಾಗಿ ಏರುತ್ತಿದೆ.
ಆಗಸ್ಟ್ 2026ರ ಮಾರಾಟ ವರದಿ ಪ್ರಕಾರ, ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಒಟ್ಟು 1,21,391 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ ಈ ವಿಭಾಗದಲ್ಲಿ ಶೇ.40.88ರಷ್ಟು ಭರ್ಜರಿ ಬೆಳವಣಿಗೆ ದಾಖಲಾಗಿದೆ.
ಇದೀಗ ಆಗಸ್ಟ್‌ನಲ್ಲಿ ಹೆಚ್ಚು ಮಾರಾಟವಾದ ಟಾಪ್ 10 ಸಬ್-4 ಮೀಟರ್ ಎಸ್‌ಯುವಿಗಳ ಪಟ್ಟಿ ಇಲ್ಲಿದೆ.
1. ಟಾಟಾ ಪಂಚ್ ಮತ್ತು ಪಂಚ್ EV
ಟಾಟಾ ಮೋಟಾರ್ಸ್‌ನ ಜನಪ್ರಿಯ ಮೈಕ್ರೋ ಎಸ್‌ಯುವಿ ಪಂಚ್ (ICE ಮತ್ತು EV ಎರಡೂ ಆವೃತ್ತಿಗಳನ್ನು ಸೇರಿಸಿ) ಆಗಸ್ಟ್ 2026ರಲ್ಲಿ 21,320 ಯುನಿಟ್‌ಗಳ ಮಾರಾಟ ದಾಖಲಿಸಿ ಮೊದಲ ಸ್ಥಾನ ಪಡೆದಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ 10,704 ಯುನಿಟ್‌ಗಳು ಮಾರಾಟವಾಗಿದ್ದವು. ಈ ಬಾರಿ ಶೇ.99.18ರಷ್ಟು ವರ್ಷದಿಂದ ವರ್ಷಕ್ಕೆ (YoY) ಬೆಳವಣಿಗೆ ಕಂಡಿದೆ. ಈ ವಿಭಾಗದಲ್ಲಿ ಪಂಚ್ ಶೇ.17.56ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
2. ಮಾರುತಿ ಸುಜುಕಿ ಫ್ರಾಂಕ್ಸ್
ಮಾರುತಿ ಸುಜುಕಿಯ ಕೂಪೆ-ಸ್ಟೈಲ್ ಕ್ರಾಸ್‌ಓವರ್ ಫ್ರಾಂಕ್ಸ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಆಗಸ್ಟ್ 2026ರಲ್ಲಿ ಒಟ್ಟು 18,730 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 12,422 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಫ್ರಾಂಕ್ಸ್ ಶೇ.50.78ರಷ್ಟು ಬೆಳವಣಿಗೆ ದಾಖಲಿಸಿದ್ದು, ಶೇ.15.43ರಷ್ಟು ಮಾರುಕಟ್ಟೆ ಪಾಲು ಪಡೆದುಕೊಂಡಿದೆ.
3. ಟಾಟಾ ನೆಕ್ಸಾನ್ ಮತ್ತು ನೆಕ್ಸಾನ್ EV
ಉತ್ತಮ ಸುರಕ್ಷತೆ ಮತ್ತು ಶಕ್ತಿಶಾಲಿ ಕಾರ್ಯಕ್ಷಮತೆಗೆ ಜನಪ್ರಿಯವಾಗಿರುವ ಟಾಟಾ ನೆಕ್ಸಾನ್ (ಪೆಟ್ರೋಲ್, ಡೀಸೆಲ್ ಮತ್ತು EV) ಟಾಪ್ 10 ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಆಗಸ್ಟ್ 2026ರಲ್ಲಿ ಒಟ್ಟು 18,431 ಯುನಿಟ್‌ಗಳು ಮಾರಾಟವಾಗಿವೆ. ಆಗಸ್ಟ್ 2025ರಲ್ಲಿ 14,004 ಯುನಿಟ್‌ಗಳು ಮಾರಾಟವಾಗಿದ್ದವು. ಇದರಿಂದ ಶೇ.31.61ರಷ್ಟು ವಾರ್ಷಿಕ ಬೆಳವಣಿಗೆ ದಾಖಲಾಗಿದೆ. ನೆಕ್ಸಾನ್‌ನ ಮಾರುಕಟ್ಟೆ ಪಾಲು ಶೇ.15.18ರಷ್ಟಿದೆ.
4. ಮಾರುತಿ ಸುಜುಕಿ ಬ್ರೆಝಾ
ಮಾರುತಿ ಸುಜುಕಿಯ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ಬ್ರೆಝಾ ಆಗಸ್ಟ್ 2026ರಲ್ಲಿ 15,288 ಯುನಿಟ್‌ಗಳ ಮಾರಾಟ ದಾಖಲಿಸಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ 13,620 ಯುನಿಟ್‌ಗಳು ಮಾರಾಟವಾಗಿದ್ದವು. ಈ ಬಾರಿ ಶೇ.12.25ರಷ್ಟು ಬೆಳವಣಿಗೆ ಕಂಡಿದೆ. ಮಾರುಕಟ್ಟೆಯಲ್ಲಿ ಬ್ರೆಝಾದ ಪಾಲು ಶೇ.12.59ರಷ್ಟಿದೆ.
5. ಹ್ಯುಂಡೈ ವೆನ್ಯೂ
ಹ್ಯುಂಡೈ ಮೋಟಾರ್ ಇಂಡಿಯಾದ ಜನಪ್ರಿಯ ಕಾಂಪ್ಯಾಕ್ಟ್ ಎಸ್‌ಯುವಿ ವೆನ್ಯೂ ಕಳೆದ ತಿಂಗಳು ಐದನೇ ಸ್ಥಾನದಲ್ಲಿದೆ.
ಆಗಸ್ಟ್ 2026ರಲ್ಲಿ 11,365 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 8,109 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ವೆನ್ಯೂ ಶೇ.40.15ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದ್ದು, ಶೇ.9.36ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
6. ಕಿಯಾ ಸೋನೆಟ್
ಕಿಯಾ ಇಂಡಿಯಾದ ಸ್ಟೈಲಿಶ್ ಕಾಂಪ್ಯಾಕ್ಟ್ ಎಸ್‌ಯುವಿ ಸೋನೆಟ್ ಆಗಸ್ಟ್ 2026ರಲ್ಲಿ 9,048 ಯುನಿಟ್‌ಗಳ ಮಾರಾಟ ದಾಖಲಿಸಿ ಆರನೇ ಸ್ಥಾನದಲ್ಲಿದೆ.
ಕಳೆದ ವರ್ಷದ ಆಗಸ್ಟ್‌ನಲ್ಲಿ 7,741 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಸುಮಾರು ಶೇ.17ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ. ಸೋನೆಟ್‌ನ ಮಾರುಕಟ್ಟೆ ಪಾಲು ಶೇ.7.45ರಷ್ಟಿದೆ.
7. ಮಹೀಂದ್ರಾ XUV 3XO ಮತ್ತು XUV 3XO EV
ಮಹೀಂದ್ರಾದ ಜನಪ್ರಿಯ ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ XUV 3XO ಮತ್ತು ಅದರ EV ಆವೃತ್ತಿ ಏಳನೇ ಸ್ಥಾನ ಪಡೆದುಕೊಂಡಿವೆ.
ಆಗಸ್ಟ್ 2026ರಲ್ಲಿ ಒಟ್ಟು 8,302 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 5,521 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಶೇ.50.37ರಷ್ಟು ಭರ್ಜರಿ ಬೆಳವಣಿಗೆ ದಾಖಲಿಸಿದ್ದು, ಶೇ.6.84ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
8. ಹ್ಯುಂಡೈ ಎಕ್ಸ್‌ಟರ್
ಹ್ಯುಂಡೈನ ಎಂಟ್ರಿ-ಲೆವೆಲ್ ಮೈಕ್ರೋ ಎಸ್‌ಯುವಿ ಎಕ್ಸ್‌ಟರ್ ಕೂಡ ಉತ್ತಮ ಪ್ರದರ್ಶನ ನೀಡಿದ್ದು ಎಂಟನೇ ಸ್ಥಾನದಲ್ಲಿದೆ.
ಆಗಸ್ಟ್ 2026ರಲ್ಲಿ 8,157 ಯುನಿಟ್‌ಗಳು ಮಾರಾಟವಾಗಿವೆ. ಆಗಸ್ಟ್ 2025ರಲ್ಲಿ 5,061 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಎಕ್ಸ್‌ಟರ್ ಶೇ.61.17ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದ್ದು, ಶೇ.6.72ರಷ್ಟು ಮಾರುಕಟ್ಟೆ ಪಾಲು ಪಡೆದುಕೊಂಡಿದೆ.
9. ಸ್ಕೋಡಾ ಕೈಲಾಕ್
ಸಬ್-4 ಮೀಟರ್ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ಸ್ಕೋಡಾ ಕೈಲಾಕ್ ಒಂಬತ್ತನೇ ಸ್ಥಾನದಲ್ಲಿದೆ.
ಆಗಸ್ಟ್ 2026ರಲ್ಲಿ ಈ ಕಾರಿನ 3,590 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ತಿಂಗಳಲ್ಲಿ 3,099 ಯುನಿಟ್‌ಗಳು ಮಾರಾಟವಾಗಿದ್ದವು. ಕೈಲಾಕ್ ಶೇ.15.84ರಷ್ಟು ಬೆಳವಣಿಗೆ ದಾಖಲಿಸಿದ್ದು, ಶೇ.2.96ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.
10. ಟೊಯೊಟಾ ಟೈಸರ್
ಮಾರುತಿ ಫ್ರಾಂಕ್ಸ್ ಆಧಾರಿತ ಟೊಯೊಟಾದ ಕ್ರಾಸ್‌ಓವರ್ ಟೈಸರ್ ಆಗಸ್ಟ್ 2026ರ ಟಾಪ್ 10 ಪಟ್ಟಿಯಲ್ಲಿ ಹತ್ತನೇ ಸ್ಥಾನ ಪಡೆದಿದೆ.
ಈ ಅವಧಿಯಲ್ಲಿ ಒಟ್ಟು 2,863 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 2,683 ಯುನಿಟ್‌ಗಳು ಮಾರಾಟವಾಗಿದ್ದವು. ಈ ಮೂಲಕ ಟೈಸರ್ ಶೇ.6.71ರಷ್ಟು ಬೆಳವಣಿಗೆ ದಾಖಲಿಸಿದ್ದು, ಶೇ.2.36ರಷ್ಟು ಮಾರುಕಟ್ಟೆ ಪಾಲು ಹೊಂದಿದೆ.

