ಬೆಂಗಳೂರು: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸಂಚಾರ ಹಾಗೂ ಸಂಯೋಗಕ್ಕೆ ಅತ್ಯಂತ ವಿಶೇಷ ಮಹತ್ವವಿದೆ. ನವಗ್ರಹಗಳ ಚಲನೆಯಲ್ಲಿ ಆಗುವ ಸಣ್ಣ ಬದಲಾವಣೆಯೂ ಮಾನವನ ಜೀವನದ ಮೇಲೆ ನೇರ ಪ್ರಭಾವ ಬೀರುತ್ತದೆ. ಇದೀಗ ಆಗಸ್ಟ್ 1ರಂದು ಜ್ಯೋತಿಷ್ಯ ಪ್ರಪಂಚದಲ್ಲಿ ಮಹತ್ವದ ವಿದ್ಯಮಾನವೊಂದು ಜರುಗಲಿದೆ. ಐಶ್ವರ್ಯ ಪ್ರೀತಿ ಮತ್ತು ವೈಭವದ ಕಾರಕನಾದ ಶುಕ್ರ ಹಾಗೂ ಮೋಕ್ಷ ಕಾರಕನಾದ ಕೇತು ಗ್ರಹಗಳ ಅಪರೂಪದ ಯುತಿ (ಸಂಯೋಗ) ಏರ್ಪಡುತ್ತಿದೆ.
ಇಷ್ಟೇ ಅಲ್ಲದೆ, ಅದೇ ದಿನ ಶುಕ್ರನು ಸಿಂಹ ರಾಶಿಯಿಂದ ತನ್ನ ಮಿತ್ರ ಗ್ರಹ ಬುಧನ ಒಡೆತನದ ಕನ್ಯಾ ರಾಶಿಗೆ ಪಾದಾರ್ಪಣೆ ಮಾಡಲಿದ್ದಾನೆ. ಈ ಮಹತ್ತರ ಗ್ರಹಗಳ ಚಲನೆಯು 12 ರಾಶಿಗಳ ಮೇಲೆ ಪರಿಣಾಮ ಬೀರಲಿದೆಯಾದರೂ, ವಿಶೇಷವಾಗಿ ೬ ರಾಶಿಯವರ ಬದುಕಿನಲ್ಲಿ ಸುವರ್ಣ ಅಧ್ಯಾಯ ಆರಂಭವಾಗಲಿದೆ. ಆ ಅದೃಷ್ಟಶಾಲಿ ರಾಶಿಗಳ ವಿವರ ಇಲ್ಲಿದೆ:
ವೃಷಭ ರಾಶಿ: ದೀರ್ಘಕಾಲದ ಕನಸುಗಳು ನನಸಾಗುವ ಸಮಯ
ವೃಷಭ ರಾಶಿಯವರಿಗೆ ಈ ಸಂಯೋಗವು ಅತ್ಯಂತ ಶುಭ ಫಲಗಳನ್ನು ತರಲಿದೆ. ನೀವು ಬಹುಕಾಲದಿಂದ ಕಂಡಿದ್ದ ಕನಸುಗಳು ಒಂದೊಂದಾಗಿ ನನಸಾಗುವ ಕಾಲವಿದು. ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾರಿಸಲಿದ್ದು, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಹಾಗೂ ಬಡ್ತಿ (Promotion) ಸಿಗುವ ಸಾಧ್ಯತೆಗಳು ಹೆಚ್ಚಿವೆ.
ಮಿಥುನ ರಾಶಿ: ಅನಿರೀಕ್ಷಿತ ಧನಲಾಭ ಹಾಗೂ ಯಶಸ್ಸು
ಮಿಥುನ ರಾಶಿಯವರಿಗೆ ಆಗಸ್ಟ್ 1ರಿಂದ ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ. ವ್ಯಾಪಾರ-ವ್ಯವಹಾರದಲ್ಲಿ ತೊಡಗಿರುವವರಿಗೆ ಅನಿರೀಕ್ಷಿತ ಲಾಭ ಕಾದಿದೆ. ಕೌಟುಂಬಿಕ ಜೀವನದಲ್ಲಿನ ಹಳೆಯ ಭಿನ್ನಾಪ್ರಾಯಗಳು ದೂರವಾಗಿ ನೆಮ್ಮದಿ ನೆಲೆಸಲಿದೆ. ಜೊತೆಗೆ ಸೆಪ್ಟೆಂಬರ್ವರೆಗೆ ಮನೆ, ವಾಹನ ಅಥವಾ ಆಸ್ತಿ ಖರೀದಿಸುವ ಯೋಗವೂ ಸೃಷ್ಟಿಯಾಗಲಿದೆ.
ಸಿಂಹ ರಾಶಿ: ಸಾಲದಿಂದ ಮುಕ್ತಿ, ಗೌರವ ಹೆಚ್ಚಳ
ಸಿಂಹ ರಾಶಿಯವರಿಗೆ ಶುಕ್ರನ ಈ ಬದಲಾವಣೆಯು ಹೊಸ ಆಶಾದಾಯಕ ಅವಕಾಶಗಳನ್ನು ತರಲಿದೆ. ಬಹಳ ದಿನಗಳಿಂದ ಕಾಡುತ್ತಿದ್ದ ಸಾಲದ ಬಾಧೆಗೆ ಮುಕ್ತಿ ಸಿಗುವ ಸಾಧ್ಯತೆ ಇದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದ್ದು, ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಅಥವಾ ಬಡ್ತಿಯ ಯೋಗ ಹುಡುಕಿಕೊಂಡು ಬರಲಿದೆ.
ಕನ್ಯಾ ರಾಶಿ: ಸ್ವ-ರಾಶಿಯಲ್ಲೇ ಶುಕ್ರ; ಒಲಿದು ಬರಲಿದೆ ಭಾರಿ ಅದೃಷ್ಟ
ಆಗಸ್ಟ್ 1ರಿಂದ ಶುಕ್ರನು ನಿಮ್ಮದೇ ರಾಶಿಯಲ್ಲಿ ಸಂಚರಿಸುವುದರಿಂದ ನಿಮಗೆ ಅತ್ಯಂತ ಶುಭಕರ ವಾತಾವರಣ ಇರಲಿದೆ. ಹಠಾತ್ ಧನಲಾಭದ ಜೊತೆಗೆ, ನೀವು ಮಾಡುವ ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ನಿಮ್ಮ ಮಾತು ಹಾಗೂ ವ್ಯಕ್ತಿತ್ವದ ಆಕರ್ಷಣೆ ಹೆಚ್ಚಾಗಲಿದ್ದು, ಕಾರ್ಯಕ್ಷೇತ್ರದಲ್ಲಿ ಜಯ ನಿಮ್ಮದಾಗಲಿದೆ.
ತುಲಾ ರಾಶಿ: ಹೊಸ ಆಸ್ತಿ ಖರೀದಿ ಮತ್ತು ಸುಖ ದಾಂಪತ್ಯ
ತುಲಾ ರಾಶಿಯ ಅಧಿಪತಿಯೇ ಶುಕ್ರನಾಗಿರುವುದರಿಂದ ಈ ಯುತಿಯು ನಿಮಗೆ ವಿಶೇಷ ಲಾಭ ತರಲಿದೆ. ವೈವಾಹಿಕ ಜೀವನದಲ್ಲಿ ಮಾಧುರ್ಯ ಹೆಚ್ಚಾಗಲಿದ್ದು, ದಂಪತಿಗಳ ನಡುವೆ ಪ್ರೀತಿ ಬೆಳೆಯಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ ಹಾಗೂ ಹೊಸ ವಾಹನ/ಆಸ್ತಿ ಖರೀದಿಸುವ ಕನಸು ಈಡೇರಲಿದೆ.
ಕುಂಭ ರಾಶಿ: ಆರ್ಥಿಕ ಬಲ ಹಾಗೂ ಸಂಪೂರ್ಣ ಗೆಲುವು
ಕುಂಭ ರಾಶಿಯವರಿಗೆ ಈ ಶುಕ್ರ-ಕೇತು ಯುತಿಯು ಅಕ್ಷರಶಃ ವರದಾನವಾಗಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಆರ್ಥಿಕ ಲಾಭ ಗಳಿಸುವಿರಿ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಮುಖ ಕೆಲಸಗಳು ಯಾವುದೇ ವಿಘ್ನವಿಲ್ಲದೆ ಪೂರ್ಣಗೊಳ್ಳಲಿವೆ. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದ್ದು, ಮಾನಸಿಕ ನೆಮ್ಮದಿ ಸಿಗಲಿದೆ.

