ಭಾರತದಲ್ಲಿ ಲಾಂಚ್‌ ಆಗಿದೆ ಆಡಿ ಕ್ಯೂ5 ಬೋಲ್ಡ್‌ ಕಾರು; ಅದ್ಭುತವಾಗಿದೆ ವಿನ್ಯಾಸ ಮತ್ತು ಫೀಚರ್ಸ್‌…!

ಐಷಾರಾಮಿ ಕಾರು ತಯಾರಿಕಾ ಕಂಪನಿ ಆಡಿ ಇಂಡಿಯಾ, ಭಾರತದಲ್ಲಿ ಕ್ಯೂ5ನ ಬೋಲ್ಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಆಡಿ ಕ್ಯೂ5 ಅದ್ಭುತ ವೈಶಿಷ್ಟ್ಯಗಳನ್ನು ಮತ್ತು ಸುಂದರ ವಿನ್ಯಾಸವನ್ನು ಹೊಂದಿದೆ. ಕ್ಯೂ5 ಕಾರನ್ನು 5 ಬಣ್ಣಗಳಲ್ಲಿ ಪರಿಚಯಿಸಲಾಗಿದೆ. ಗ್ಲೇಸಿಯರ್ ವೈಟ್, ಮಿಥೋಸ್ ಬ್ಲ್ಯಾಕ್, ನವರ ಬ್ಲೂ, ಡಿಸ್ಟ್ರಿಕ್ಟ್ ಗ್ರೀನ್ ಮತ್ತು ಮ್ಯಾನ್‌ಹ್ಯಾಟನ್ ಗ್ರೇ ಬಣ್ಣಗಳಲ್ಲಿ ಇದು ಲಭ್ಯವಿದೆ.

ಹೊಸ ಕಾರಿನ ವಿನ್ಯಾಸ ಅದ್ಭುತವಾಗಿದೆ. ಕಪ್ಪು ಬಣ್ಣದಲ್ಲಿ ಸ್ಟೈಲಿಂಗ್‌ ಮಾಡಲಾಗಿದೆ. ಕಪ್ಪನೆಯ ಗ್ರಿಲ್, ಆಡಿ ಲಾಂಛನ, ಬಾಹ್ಯ ಕನ್ನಡಿ ಹೀಗೆ ಎಲ್ಲವೂ ಅತ್ಯಂತ ಆಕರ್ಷಕವಾಗಿವೆ.

ಇದಕ್ಕೆ 19 ಇಂಚಿನ ಸ್ಪೋರ್ಟಿ ಚಕ್ರಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಅಡಾಪ್ಟಿವ್ ಸಸ್ಪೆನ್ಷನ್, ಎಲ್ಇಡಿ ಲೈಟಿಂಗ್, ಪನೋರಮಿಕ್ ಸನ್‌ರೂಫ್ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನೂ ಇದು  ಹೊಂದಿದೆ. ಅಷ್ಟೇ ಅಲ್ಲ 360 ಡಿಗ್ರಿ ಕ್ಯಾಮೆರಾ ಮತ್ತು ಪ್ರೀಮಿಯಂ ಬಿ&ಓ ಸೌಂಡ್ ಸಿಸ್ಟಂ ಕೂಡ ಅಳವಡಿಸಲಾಗಿದೆ.

ಹೊಸ ಕಾರಿನ ಸೀಟುಗಳು ಕೂಡ ಬಹಳ ಆಕರ್ಷಕವಾಗಿವೆ. 3-ವಲಯ ಹವಾಮಾನ ನಿಯಂತ್ರಣ ವ್ಯವಸ್ಥೆಯನ್ನು ಸಹ ಇದು ಹೊಂದಿದೆ. ಕಾರಿನಲ್ಲಿ ಸುರಕ್ಷತೆಗಾಗಿ 8 ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ.

ಕಂಪನಿಯು ಹೊಸ ಆಡಿ ಕ್ಯೂ5 ಬೋಲ್ಡ್ ಆವೃತ್ತಿಯಲ್ಲಿ 2.0 ಲೀಟರ್ ಟಿಎಫ್‌ಎಸ್‌ಐ ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ ಗರಿಷ್ಠ 265 HP ಶಕ್ತಿಯೊಂದಿಗೆ 370 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕಾರು ಕೇವಲ 6.1 ಸೆಕೆಂಡುಗಳಲ್ಲಿ ಗಂಟೆಗೆ ಸೊನ್ನೆಯಿಂದ 100 ಕಿಮೀ ವೇಗವನ್ನು ಪಡೆಯುವ ಸಾಮರ್ಥ್ಯವನ್ನು ಹೊಂದಿದೆ. ಇದು ಗಂಟೆಗೆ 240 ಕಿ.ಮೀ. ಓಡಬಲ್ಲದು. ಕಾರಿಗೆ ಆಲ್ ವೀಲ್ ಡ್ರೈವ್ ಸಿಸ್ಟಮ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಅನ್ನು ಸಹ ನೀಡಲಾಗಿದೆ.

ಆಡಿ ಇಂಡಿಯಾ ಈ ಐಷಾರಾಮಿ ಕಾರಿನ ಎಕ್ಸ್ ಶೋ ರೂಂ ಬೆಲೆಯನ್ನು 72.30 ಲಕ್ಷ ರೂಪಾಯಿ ನಿಗದಿಪಡಿಸಿದೆ. ಈ ಕಾರು ಮಾರುಕಟ್ಟೆಯಲ್ಲಿ ಪ್ರಸ್ತುತ BMW ಮತ್ತು Mercedes-Benz ನಂತಹ ವಾಹನಗಳಿಗೆ ಪೈಪೋಟಿ ಒಡ್ಡುವುದು ಖಚಿತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read