HomeLatest NewsBIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : 'KSRTC' ಯಿಂದ ಉಚಿತರಿಯಾಯಿತಿ ಬಸ್ ಪಾಸ್...

BIG NEWS : ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ‘KSRTC’ ಯಿಂದ ಉಚಿತ\ರಿಯಾಯಿತಿ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನ

ಬೆಂಗಳೂರು : 2025-26ನೇ ಸಾಲಿಗೆ ವಿದ್ಯಾರ್ಥಿ ಉಚಿತ / ರಿಯಾಯಿತಿ ಬಸ್ ಪಾಸ್ ವಿತರಿಸುವ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸುತ್ತೋಲೆ ಹೊರಡಿಸಿದೆ.

ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ / ರಿಯಾಯಿತಿ ಬಸ್ ಪಾಸ್ ವಿತರಣೆ ಮಾಡುತ್ತಿದೆ ಹಾಗೂ 2017-18 ನೇ ಸಾಲಿನಿಂದ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣಿ ಮಾಡುತ್ತಿದೆ. 2023-24ನೇ ಸಾಲಿನಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ವಿದ್ಯಾರ್ಥಿ ಬಸ್ ಪಾಸ್ ವಿತರಣೆಯನ್ನು ಸಂಪೂರ್ಣವಾಗಿ ಗಣಕೀಕೃತಗೊಳಿಸಲು ಸರ್ಕಾರದ ನಿರ್ದೇಶನವಿರುತ್ತದೆ. ಈ ಸಂಬಂಧ ವಿದ್ಯಾರ್ಥಿ ಪಾಸುಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ, ಕೆ-1 / ಜಿ-1 ಕೇಂದ್ರಗಳ ಮುಖಾಂತರ ಪಾಸುಗಳನ್ನು ವಿತರಿಸುವ ವ್ಯವಸ್ಥೆಯನ್ನು ಕರಾರಸಾ ನಿಗಮದಿಂದ ಕಲ್ಪಿಸಲಾಗಿರುತ್ತದೆ.

ಕಳೆದ ಸಾಲಿನಂತೆ ಪ್ರಸಕ್ತ ಸಾಲಿನಲ್ಲಿಯೂ ಸಹ ವಿದ್ಯಾರ್ಥಿ ಪಾಸುಗಳನ್ನು ಸಂಪೂರ್ಣ ಗಣಕೀಕೃತವಾಗಿ ಪಾಸುಗಳನ್ನು ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಡಿಸಿಎಸ್ ಇಲಾಖೆಯು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು, ವಿದ್ಯಾರ್ಥಿಗಳ ವಿವರಗಳನ್ನು ದಾಖಲಿಸಲು. SATS / UUCMS /PUE ಡಾಟಾಬೇಸ್ ಜೊತೆಗೆ ಆಧಾರ್ / ಕುಟುಂಬ ಡಾಟಾಬೇಸ್ನಿಂದ ವಿದ್ಯಾರ್ಥಿಗಳ ವಿವರಗಳು ದಾಖಲಾಗಲಿವೆ. ಇದರ ಜೊತೆಗೆ ಕೆ-1 (ಕರ್ನಾಟಕ ಒನ್), ಜಿ-1 (ಗ್ರಾಮ ಒನ್) ಕೇಂದ್ರಗಳು ಹಾಗೂ ಇಡಿಸಿಎಸ್ ಸಿಬ್ಬಂದಿಗಳ ನಿಯೋಜನೆಯೊಂದಿಗೆ ನಿಗಮದ ಬಸ್ ನಿಲ್ದಾಣಗಳಲ್ಲಿನ ಪಾಸ್ ಕೌಂಟರ್ಗಳಲ್ಲಿ ವಿದ್ಯಾರ್ಥಿ ಬಸ್ ಪಾಸ್ಗಳನ್ನು ವಿತರಿಸಲಾಗುವುದು. ಇಡಿಸಿಎಸ್ ಇಲಾಖೆಯ ನಿಯೋಜಿತ ಸಿಬ್ಬಂದಿಗಳು ನಿಗಮದ ಪಾಸ್ ಕೌಂಟರ್ಗಳಲ್ಲಿ ಹಾಗೂ ಅಗತ್ಯವಿರುವೆಡೆ ಶಾಲಾ / ಕಾಲೇಜುಗಳಲ್ಲಿ ಕೌಂಟರ್ ತೆರೆದು ಬಸ್ ಪಾಸ್ ವಿತರಣೆ ಮಾಡಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ಗಮನಿಸಬೇಕಾದ ನಿರ್ದಿಷ್ಟ ಅಂಶಗಳು:

  1. ವಿದ್ಯಾರ್ಥಿ ಬಸ್ ಪಾಸ್ ವೈಯಕ್ತಿಕ ಮಾಹಿತಿಯುಳ್ಳ ಪಿವಿಸಿ ಕಾರ್ಡ್ ಆಗಿದ್ದು, ಸದರಿ ಕಾರ್ಡಿನ ಮೇಲೆ ವಿದ್ಯಾರ್ಥಿಯ ಭಾವಚಿತ್ರ, ಹೆಸರು. ಪ್ರಯಾಣದ ಮಾರ್ಗ, ಪಾಸಿನ ಮಾನ್ಯತಾ ಅವಧಿ ಮುದ್ರಿತವಾಗುತ್ತದೆ. ಪ್ರತಿಯೊಂದು ಕಾರ್ಡಿಗೂ ಅನನ್ಯ (unique) ಸಂಖ್ಯೆಯಿದ್ದು ಕಾರ್ಡಿನ ಮೇಲ್ಬಾಗದಲ್ಲಿ ಮುದ್ರಿತವಾಗುತ್ತದೆ. ಅಲ್ಲದೇ ಕ್ಯೂಆರ್ ಕೋಡ್ನಲ್ಲಿ ವಿದ್ಯಾರ್ಥಿ ಮಾಹಿತಿ, ಪ್ರಯಾಣದ ಮಾರ್ಗ, ಪಾಸ್ನ ಮಾನ್ಯತೆ, ಅವಧಿ ಒಳಗೊಂಡಿರುತ್ತದೆ.
  2. ಸರ್ಕಾರದ ನೂತನ ಯೋಜನೆಯಾದ “ಶಕ್ತಿ ಯೋಜನೆ”ಯಡಿಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರು (ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ) ರಾಜ್ಯದೊಳಗೆ ನಗರ, ಸಾಮಾನ್ಯ ಹಾಗೂ ವೇಗದೂತ ಸಾರಿಗೆಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಯೋಜನೆಯಡಿ ರಾಜ್ಯದೊಳಗೆ ಪ್ರಯಾಣಿಸುವ ವಿದ್ಯಾರ್ಥಿನಿಯರು ವಿದ್ಯಾರ್ಥಿ ಬಸ್ ಪಾಸ್ ಪಡೆಯುವ ಅಗತ್ಯವಿರುವುದಿಲ್ಲ. ಆದರೆ, ವಿದ್ಯಾರ್ಥಿನಿಯರು ಬಸ್ ಪಾಸ್ ಪಡೆಯಲು ಇಚ್ಚಿಸಿದಲ್ಲಿ ಪಾಸನ್ನು ವಿತರಿಸಬಹುದಾಗಿರುತ್ತದೆ.
    . ನೆರೆರಾಜ್ಯದಲ್ಲಿ ವಾಸವಿದ್ದು ಕರ್ನಾಟಕ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯದ ಶಾಲೆ / ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ, ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು, ವಿದ್ಯಾರ್ಥಿ ರಿಯಾಯಿತಿ ಬಸ್ ಪಾಸ್ ಪಡೆಯುವ ಅಗತ್ಯವಿದೆ. ಮೇಲ್ಕಂಡ ಕ್ರಮಗಳನ್ನು ಅನುಸರಿಸಿ ಗಡಿಭಾಗದ ವಿದ್ಯಾರ್ಥಿಗಳು ಪಾಸುಗಳನ್ನು ಪಡೆಯಬಹುದಾಗಿರುತ್ತದೆ.
  3. ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ದಾಖಲಿಸಿದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಿವರಗಳು ಸ್ವಯಂ ಪ್ರಕಟಗೊಳ್ಳಲು ಕ್ರಮವಹಿಸಲಾಗಿದೆ.
  4. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಆರ್.ಡಿ.ಸಂಖ್ಯೆಯನ್ನು ನಮೂದಿಸಿದಲ್ಲಿ ವಿದ್ಯಾರ್ಥಿಗಳ ವಿವರಗಳು ತಂತ್ರಾಂಶದಲ್ಲಿ ಪರಿಶೀಲನೆಗೊಳ್ಳುವಂತೆ ಕ್ರಮವಹಿಸಲಾಗಿದೆ.
    ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ಕೈಗೊಳ್ಳಬೇಕಾದ ಕ್ರಮ:
    ವಿದ್ಯಾರ್ಥಿಗಳು ಪಾಸಿಗಾಗಿ ಅರ್ಜಿ ಸಲ್ಲಿಸುವ ವಿಧಾನ:
  5. ವಿದ್ಯಾರ್ಥಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಆನ್ಲೈನ್ ಮುಖೇನ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ.
  6. ໑໖ (URL-sevasindhu.karnataka.gov.in).
  7. ಆನ್ಲೈನ್ ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಇದಲ್ಲದೇ, ವಿದ್ಯಾರ್ಥಿಗಳು ಕರ್ನಾಟಕ-ಒನ್, ಗ್ರಾಮ-ಒನ್ ಮತ್ತು ಬೆಂಗಳೂರು-ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಗಳ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ. ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ರೂ.30/- ಸೇವಾ ಶುಲ್ಕವನ್ನು ಸದರಿ ಕೇಂದ್ರಗಳ ಸಿಬ್ಬಂದಿಗಳು ಪಡೆಯಲು ಅವಕಾಶವಿರುತ್ತದೆ.
  8. ರಾಜ್ಯದಲ್ಲಿ ವಾಸವಿದ್ದು ನೆರೆರಾಜ್ಯಗಳಲ್ಲಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ನೆರೆರಾಜ್ಯಗಳಲ್ಲಿ ವಾಸವಿದ್ದು, ರಾಜ್ಯದೊಳಗಿನ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಸೇವಾಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಬೇಕಿರುತ್ತದೆ.
  9. SATS/ UUCMS/ PUEಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳು ಪಾಸ್ಗಾಗಿ ಅರ್ಜಿ ಸಲ್ಲಿಸುವಿಕೆ:
  10. ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯು ಒದಗಿಸಿರುವ SATS (Student Achievement Tracking System), PUE (Pre University Education) UUCMS (Unified University College Management System) ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಯು ಸಲ್ಲಿಸುವ ಅರ್ಜಿಯಲ್ಲಿ ಅಗತ್ಯವಿರುವ ಮಾಹಿತಿಯನ್ನು ಸ್ವಯಂಚಾಲಿತವಾಗಿ ತೆಗೆದುಕೊಳ್ಳಲಿದ್ದು, ಪ್ರಯಾಣದ ಮಾರ್ಗ ಮತ್ತು ಪಾಸ್ ವಿತರಣೆಯ ಕಛೇರಿ (ಕೆ1/ಜಿ1/ ಪಾಸ್ ಕೌಂಟರ್) ಆಯ್ಕೆ ಮಾಡಿ ಮಾಹಿತಿಯನ್ನು ಭರ್ತಿ ಮಾಡಿ ಆನ್ಲೈನ್ನಲ್ಲಿ ಅರ್ಜಿಯನ್ನು ಸಲ್ಲಿಸುವುದು.
  11. ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಸಂಬಂಧಿಸಿದ ಎಲ್ಲಾ ವಿವರಗಳು ಸಮರ್ಪಕವಾಗಿದ್ದಲ್ಲಿ ಸ್ವಯಂಚಾಲಿತವಾಗಿ (automatic approval) ಅನುಮೋದನೆ ದೊರಕಲಿದೆ.
  12. ತದನಂತರ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಾಸ್ ಪಡೆಯುವ ದಿನಾಂಕ, ಸಂಪರ್ಕಿಸಬೇಕಾದ ಕೆ1/ಜಿ1/ ಪಾಸ್ ಕೌಂಟರ್ನ ವಿವರಗಳ ಸಂಬಂಧಿತ ಎಸ್ಎಂಎಸ್ ರವಾನೆಯಾಗಲಿದೆ.
  13. ವಿದ್ಯಾರ್ಥಿಗಳು ಸಂಬಂಧಿಸಿದ ಪಾಸ್ ಕೌಂಟರ್ಗೆಗೆ ತೆರಳಿ ನಿಗದಿತ ಪಾಸ್ ಶುಲ್ಕವನ್ನು ನಗದು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಯುಪಿಐ ಮುಖೇನ ಪಾವತಿಸಿ ಪಾಸನ್ನು ಪಡೆಯಬಹುದಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular