HomeLatest Newsರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಿದ್ಯಾಭ್ಯಾಸ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : ವಿದ್ಯಾಭ್ಯಾಸ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ವತಿಯಿಂದ 2025-26 ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪದವಿ ಕೋರ್ಸ್ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ರಿನ್ಯೂವಲ್ (Arivu Renewal) ಸಾಲದ ಯೋಜನೆಯಡಿಯಲ್ಲಿ (ವಿದ್ಯಾಭ್ಯಾಸ ಸಾಲ) ಸಾಲ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

CET/NEET/D-CET/PG-CET ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ವೈದ್ಯಕೀಯ, (ಎಂಬಿಬಿಎಸ್) ದಂತ ವೈದ್ಯಕೀಯ (ಬಿಡಿಎಸ್, ಎಂಡಿಎಸ್), ಆಯುಷ್ (ಬಿ.ಆಯುಷ್, ಎಂಆಯುಷ್) ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ಬಿ.ಇ/ಬಿ.ಟೆಕ್, ಎಂ.ಇ/ಎಂ.ಟೆಕ್) ಬ್ಯಾಚುಲರ್ ಆಪ್ ಆರ್ಕಿಟೆಕ್ಚರ್ (ಬಿ.ಆರ್ಕ್, ಎಂ.ಆರ್ಕ್) MBA, MCA, LLB, B.sc in Horticulture, Agricultural Engineering, Dairy Technology, Foresty, Veterinary and Animal Sciences, Fisheries, Sericulture, Home/Community Sciences Food Nutrition and Dietetics, B Pharma, M Pharma, Pharma D and D Pharma ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು ವೆಬ್ ಸೈಟ್: www.kmdconline.karnataka.gov.in ಮೂಲಕ ಡಿಸೆಂಬರ್ 03,2025 ರೊಳಗೆ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಯನ್ನು ಹಾಗೂ ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಡಿಸೆಂಬರ್ 06, 2025 ರೊಳಗೆ ಸಲ್ಲಿಸಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಬೆಂಗಳೂರು ನಗರ ಜಿಲ್ಲೆ, ಉತ್ತರ ವಿಭಾಗ, ನಂ.40, 2ನೇ ಅಡ್ಡರಸ್ತೆ, ಇಯರಿಂಗ್ ಕ್ಲಿನಿಕ್ ಎದುರು, ನೂರ್ ಮಸೀದಿ ಹತ್ತಿರ, 4ನೇ ಮುಖ್ಯರಸ್ತೆ, ವಸಂತಪ್ಪ ಬ್ಲಾಕ್, ಗಂಗಾ ನಗರ, ಬೆಂಗಳೂರು ಅಥವಾ ದೂರವಾಣಿ ಸಂಖ್ಯೆ: 080-23539786 ಅಥವಾ ಸಹಾಯವಾಣಿ ಸಂಖ್ಯೆ : 8277799990 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ನಗರ ಉತ್ತರ ವಿಭಾಗದ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular