HomeLatest NewsBIG NEWS : ರಾಜ್ಯದ 'NHM' ಸಿಬ್ಬಂದಿಗಳೇ ಗಮನಿಸಿ : ಇನ್ಮುಂದೆ 'KAMS APP' ನಲ್ಲಿ...

BIG NEWS : ರಾಜ್ಯದ ‘NHM’ ಸಿಬ್ಬಂದಿಗಳೇ ಗಮನಿಸಿ : ಇನ್ಮುಂದೆ ‘KAMS APP’ ನಲ್ಲಿ ಹಾಜರಾತಿ ದಾಖಲಿಸುವುದು ಕಡ್ಡಾಯ.!


ಬೆಂಗಳೂರು : ರಾಷ್ಟ್ರೀಯ ಅರೋಗ್ಯ ಅಭಿಯಾನದಡಿ ಗುತ್ತಿಗೆ / ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುವ ಸಿಬ್ಬಂದಿಗಳು KAMS APP ನಲ್ಲಿ ಕಡ್ಡಾಯವಾಗಿ ಹಾಜರಾತಿ ದಾಖಲಿಸುವಂತೆ ಸೂಚನೆ ನೀಡಲಾಗಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ /ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕಛೇರಿಗೆ ಸರಿಯಾದ ಸಮಯಕ್ಕೆ ಬಾರದೆ ಬೆಳಿಗ್ಗೆ 10.00 ಗಂಟೆ ನಂತರವೇ ಕಛೇರಿಗೆ ಹಾಜರಾಗುತ್ತಿರುವುದು ಹಾಗೂ ಹಲವು ಸಿಬ್ಬಂದಿಗಳು ಸಂಜೆ 4.00/5.00 ಗಂಟೆಗೆ ಕಛೇರಿಯಿಂದ ಹೊರಡುತ್ತಿರುವುದನ್ನು ಗಮನಿಸಲಾಗಿರುತ್ತದೆ. ನಿಗದಿತ ಸಮಯಕ್ಕೆ ಹಾಜರಾಗದೇ ಇರುವುದು ಹಾಗೂ ಬೇಗನೇ ಕಛೇರಿಯಿಂದ ಹೊರಡುವುದರಿಂದ ದಿನ ನಿತ್ಯದ ಕಛೇರಿ ಕರ್ತವ್ಯಗಳಲ್ಲಿ ವಿಳಂಬತೆ ಉಂಟಾಗಿ ಸರಿಯಾದ ಸಮಯಕ್ಕೆ ಕಛೇರಿ ಕರ್ತವ್ಯಗಳು ಪೂರ್ಣಗೊಳ್ಳುತ್ತಿಲ್ಲ.

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಪ್ಪದೇ ಬೆಳಿಗ್ಗೆ 10 ಗಂಟೆಗೆ ಕಛೇರಿಯ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಹಾಗೂ ಕಛೇರಿ ಅವಧಿಯಲ್ಲಿ ಸ್ವಸ್ಥಾನದಲ್ಲಿರಬೇಕು. KAMS APP ನಲ್ಲಿ ಹಾಜರಾತಿ ದಾಖಲಿಸದ ಹಾಗೂ ಕಛೇರಿಯ ಸಮಯಕ್ಕೆ ಹಾಜರಾಗದ ಸಿಬ್ಬಂದಿಗಳ ವಿರುದ್ಧ ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳು ತಕ್ಷಣ ಕ್ರಮಕೈಗೊಂಡು ಮುಖ್ಯ ಆಡಳಿತಾಧಿಕಾರಿಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ ರವರಿಗೆ ವರದಿ ಸಲ್ಲಿಸುವುದು. ಕಛೇರಿಗೆ ಹಾಜರಾಗುವ ವೇಳೆ ಹಾಗೂ ಬಿಡುವ ವೇಳೆಯನ್ನು ಮೊಬೈಲ್ ಆಧಾರಿತ KAMS ಅಪ್ಲಿಕೇಷನ್ ಮೂಲಕ ಹಾಜರಾತಿ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಹಾಗೂ ಕಛೇರಿ ಸಮಯದ ಪಾಲನೆ ಮಾಡದೇ ಇರುವ ಸಿಬ್ಬಂದಿಗಳ ವೇತನವನ್ನು Pro-rata ಆಧಾರದ ಮೇರೆಗೆ ಕಡಿತಗೊಳಿಸಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂದುವರೆದು ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಗೈರು ಹಾಜರಾಗುವ ಹಾಗೂ ತಡವಾಗಿ ಹಾಜರಾಗುವ ಮತ್ತು ಕಛೇರಿ ಅವಧಿ ಪೂರ್ಣಗೊಳ್ಳುವ ಮುನ್ನ ಹೊರಡುವ ಸಿಬ್ಬಂದಿಗಳ ವಿರುದ್ಧ ಯಾವುದೇ ಕಾರಣಕ್ಕೂ ಅವಕಾಶ ನೀಡದೇ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಆಡಳಿತಾಧಿಕಾರಿಗಳು ಸೂಚನೆ ನೀಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular