HomeKarnatakaಗಮನಿಸಿ : ಇಂದು ದಿನವಿಡೀ 'ಸಿಎಂ ಸಿದ್ದರಾಮಯ್ಯ’ ಜನತಾ ದರ್ಶನ : ಆಧಾರ್ ಕಾರ್ಡ್, ರೇಷನ್...

ಗಮನಿಸಿ : ಇಂದು ದಿನವಿಡೀ ‘ಸಿಎಂ ಸಿದ್ದರಾಮಯ್ಯ’ ಜನತಾ ದರ್ಶನ : ಆಧಾರ್ ಕಾರ್ಡ್, ರೇಷನ್ ಕಾರ್ಡ್ ತನ್ನಿ

ಬೆಂಗಳೂರು : ಇಂದು ಬೆಂಗಳೂರಿನಲ್ಲಿ ‘ಸಿಎಂ ಸಿದ್ದರಾಮಯ್ಯ’ ಜನತಾ ದರ್ಶನ ನಡೆಯಲಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.

ಹೌದು, ನ.27 ರಂದು ಇಂದು ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಒಂದು ದಿನದ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಜನತಾ ದರ್ಶನದಲ್ಲಿ ಅಹವಾಲು ಸಲ್ಲಿಸಲು ಆಗಮಿಸುವ ಜನರು ತಮ್ಮ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಅಥವಾ ಪಡಿತರ ಚೀಟಿ ತರಲು ಕೋರಲಾಗಿದೆ ಎಂದು ಎಕ್ಸ್ ನಲ್ಲಿ ಸಚಿವಾಲಯ ಮಾಹಿತಿ ನೀಡಿದೆ.ನಿಮ್ಮ ಅಹವಾಲುಗಳೊಂದಿಗೆ ಬನ್ನಿ, ಅದನ್ನು ಪರಿಹರಿಸುವ ಹೊಣೆ ನಮ್ಮದು. ನವೆಂಬರ್ 27ರ ಸೋಮವಾರ ನಡೆಯುವ ಜನತಾ ದರ್ಶನದಲ್ಲಿ ಭೇಟಿಯಾಗೋಣ ಎಂದು ಪೋಸ್ಟ್ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೃಹ ಕಚೇರಿ ಕೃಷ್ಣಾದಲ್ಲಿ ನವೆಂಬರ್ 27 ರ ಬೆಳಗ್ಗೆ 9 :30 ರಿಂದ ಸಿಎಂ ಸಿದ್ದರಾಮಯ್ಯರಿಂದ ‘ಮುಖ್ಯಮಂತ್ರಿ ಜನತಾ ದರ್ಶನ’ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಹಾಗೂ ಸ್ಥಳದಲ್ಲೇ ಪರಿಹಾರ ಕಲ್ಪಿಸಿ ಕೊಡಲು ಸೂಚಿಸಲಿದ್ದಾರೆ. ಜನಸಾಮಾನ್ಯರ ಸಮಸ್ಯೆ, ಅಹವಾಲುಗಳಿಗೆ ಸ್ಥಳೀಯ ಮಟ್ಟದಲ್ಲೇ ಪರಿಹಾರ ದೊರಕಿಸಿಕೊಡುವ ಉದ್ದೇಶದಿಂದ ಮುಖ್ಯಮಂತ್ರಿಗಳ ನಿರ್ದೇಶನದಂತೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ತಿಂಗಳಿಂದ ಜಿಲ್ಲಾಮಟ್ಟದಲ್ಲಿ ಜನತಾದರ್ಶನ ಆರಂಭಿಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular