ಬೆಂಗಳೂರು: ಚನ್ನಸಂದ್ರ ರೈಲು ನಿಲ್ದಾಣದಲ್ಲಿ ಯಾರ್ಡ್ ಮರುವಿನ್ಯಾಸ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ 29 ರಿಂದ ಮೇ 2 ರವರೆಗೆ ಕೆಲ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಏಪ್ರಿಲ್ 29 ರಿಂದ ಮೇ 2 ರವರೆಗೆ ಕೆಎಸ್ಆರ್ ಬೆಂಗಳೂರು –ಕೋಲಾರ, ಕೋಲಾರ -ಬಂಗಾರಪೇಟೆ, ಬಂಗಾರಪೇಟೆ –ಕೋಲಾರ, ಕೋಲಾರ- ಬೆಂಗಳೂರು ಕಂಟೋನ್ಮೆಂಟ್ ಮೆಮೊ ಸೇವೆಗಳನ್ನು ರದ್ದುಗೊಳಿಸಲಾಗುವುದು.
ಅದೇ ರೀತಿ ಎಸ್ಎಂವಿಟಿ ಬೆಂಗಳೂರು -ಬೀದರ್ ಎಕ್ಸ್ ಪ್ರೆಸ್ ವಿಶೇಷ ರೈಲು ಮೇ 1ರಂದು, ಬೀದರ್ -ಎಸ್ಎಂವಿಟಿ ಬೆಂಗಳೂರು ಎಕ್ಸ್ ಪ್ರೆಸ್ ವಿಶೇಷ ರೈಲಿನ ಸಂಚಾರ ಮೇ 2ರಂದು ರದ್ದಾಗಲಿದೆ.
ಏಪ್ರಿಲ್ 15ರಿಂದ ಮೇ 2ರವರೆಗೆ ಕೆಎಸ್ಆರ್ ಬೆಂಗಳೂರು -ಹಜೂರ್ ಸಾಹೀಬ್ ನಾಂದೇಡ್ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣದಿಂದ 75 ನಿಮಿಷ ತಡವಾಗಿ ಹೊರಡಲಿದೆ.

