HomeAutoವಾಹನ ಸವಾರರ ಗಮನಕ್ಕೆ : ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ

ವಾಹನ ಸವಾರರ ಗಮನಕ್ಕೆ : ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ

ಬೆಂಗಳೂರು : ದಸರಾ ಹಿನ್ನೆಲೆಯಲ್ಲಿ ಅಕ್ಟೋಬರ್ 24ರ ಸಂಜೆ 6 ಗಂಟೆಯಿಂದ ಅಕ್ಟೋಬರ್ 25ರ ಬೆಳಗ್ಗೆ 8 ಗಂಟೆಯವರೆಗೆ ಬೆಂಗಳೂರು ಸಂಚಾರ ಪೊಲೀಸರು ನಗರದಲ್ಲಿ ಸಂಚಾರ ನಿರ್ಬಂಧ ಮತ್ತು ತಿರುವುಗಳನ್ನು ವಿಧಿಸಿದ್ದಾರೆ.

ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುವುದು ಮತ್ತು ಪ್ರಯಾಣಿಕರು ಈ ಅವಧಿಯಲ್ಲಿ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಸಂಚಾರ ಸಲಹೆಯಲ್ಲಿ ತಿಳಿಸಲಾಗಿದೆ.

ಈ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೇವೇಗೌಡ ರಸ್ತೆ
ಜೆ.ಸಿ.ನಗರ ಮುಖ್ಯರಸ್ತೆ
ಮಠದಹಳ್ಳಿ ಮುಖ್ಯರಸ್ತೆ
ದೇಸ್ವರಾಜ್ ಅರಸ್ ರಸ್ತೆ

ಬೆಂಗಳೂರು ನಗರದ ಆರ್.ಟಿ. ನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಮುನಿರೆಡ್ಡಿಪಾಳ್ಯದಲ್ಲಿ ದಿನಾಂಕ: 24.10.2023 ರಂದು ರಾತ್ರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಾದರಿಯಲ್ಲೇ “ದಸರಾ ಮಹೋತ್ಸವ” ಜರುಗಲಿದ್ದು, ಈ ಮೆರವಣಿಗೆಯಲ್ಲಿ ಟ್ಯಾಬ್ಲೊಗಳು, ಸಂಗೀತ, ಡೊಳ್ಳುಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 100 ರಿಂದ 105 ಪಲ್ಲಕ್ಕಿ ಉತ್ಸವ ಮುರ್ತಿಗಳು ಮೆರವಣಿಗೆ ಸಾಗುವುದರಿಂದ ಸುಗಮ ಸಂಚಾರ ‘ಹಿತದೃಷ್ಟಿಯಿಂದ ಈ ಕೆಳಕಂಡ ರಸ್ತೆಗಳಲ್ಲಿ ದಿನಾಂಕ 24.10.2023 ಸಂಜೆ 06.00 ರಿಂದ ದಿನಾಂಕ:25.10.2023 ರ ಬೆಳಿಗ್ಗೆ 08.00 ಗಂಟೆಯವರೆಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಎಲ್ಲಾ ಮಾದರಿಯ ವಾಹನಗಳು ಪರ್ಯಾಯ ರಸ್ತೆಯಲ್ಲಿ ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಸೂಕ್ತ ಸ್ಥಳಗಳಲ್ಲಿ ಅಧಿಕಾರಿ/ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಸಂಚಾರ ಬಂದೋಬಸ್ತ್ ಮಾಡಿಕೊಳ್ಳಲಾಗಿರುತ್ತದೆ. ದಸರಾ ಮೆರವಣಿಗೆ ಕಾರ್ಯಕ್ರಮದ ನಿಮಿತ್ತವಾಗಿ ಸಂಚಾರ ನಿರ್ಬಂಧ ಮತ್ತು ಬದಲಿ ಮಾರ್ಗಗಳ ವಿವರಗಳು ಈ ಕೆಳಗಿನಂತೆ ಇರುತ್ತದೆ
ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾದ ರಸ್ತೆಗಳು.

1. ದೇವೇಗೌಡ ರಸ್ತೆ, 2. ಜೆ.ಸಿ.ನಗರ ಮುಖ್ಯರಸ್ತೆ,
3. ಮಠದಹಳ್ಳಿ ಮುಖ್ಯರಸ್ತೆ 4. ದೇಸ್ವರಾಜ್ ಅರಸ್ ರಸ್ತೆ.

ಮಾರ್ಗ ಬದಲಾವಣೆ ವಿವರಗಳು

ಸುಲ್ತಾನ್ ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋಸ್ಟೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ
ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

1)  ದಿಣ್ಣೂರು ಮುಖ್ಯರಸ್ತೆ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು-ಆರ್.ಟಿ.ನಗರ ಮುಖ್ಯರಸ್ತೆ – ಗುಂಡುರಾವ್ ಮನೆ ಜಂಕ್ಷನ್ – ಬಲತಿರುವು – ಬೆಂಗಳೂರ ಬಳ್ಳಾರಿ ರಸ್ತೆ-ಎಡತಿರುವು- (ಮೇಕ್ರಿಸರ್ಕಲ್ ಅಂಡರ್ಪಾಸ್ ಮೂಲಕ ಬೆಂಗಳೂರು ನಗರದ ಕಡೆಗೆ ಸಂಚರಿಸಬಹುದು) ಹಾಗೂ ಮೇಬ್ರಿ ಸರ್ಕಲ್ ಸರ್ವೀಸ್ ರಸ್ತೆ – ಎಡತಿರುವು -ಜಯಮಹಲ್ ರಸ್ತೆಯಲ್ಲಿ ನೇರವಾಗಿ ಕಂಟೋನೆಂಟ್ ರೈಲು ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿದೆ.

2] ಕಂಟೋಸ್ಟೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ – ಸುಲ್ತಾನ್ ಪಾಳ್ಯ – ಕಾವಲ್ ಭೈರಸಂದ್ರ ಕಡೆಗೆ
ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು.

ಜಯಮಹಲ್ ರಸ್ತೆ-ಮೇಕ್ರಿ ಸರ್ಕಲ್ ಬಲತಿರುವು ಬೆಂಗಳೂರು ಬಳ್ಳಾರಿ ರಸ್ತೆ – ಸಿ.ಬಿ.ಐ ಅಂಡರ್ ಬಲತಿರುವು ಸಿ.ಬಿ.ಐ ರಸ್ತೆ ಡೆಡ್ಎಂಡ್ ಬಲತಿರುವು, ಆರ್.ಟಿ.ನಗರ ಮುಖ್ಯರಸ್ತೆ- ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್-ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.

3] ಯಶವಂತಪುರ ಕಡೆಯಿಂದ ಆರ್.ಟಿ.ನಗರ-ದಿಣ್ಣೂರು – ಸುಲ್ತಾನ್ ಪಾಳ್ಯ-ಕಾವಲ್ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು:

• ಮೇಕಿಸರ್ಕಲ್-ಎಡತಿರುವು ಬೆಂಗಳೂರು ಬಳ್ಳಾರಿ ರಸ್ತೆ-ಸಿ.ಬಿ.ಐ ಅಂಡರ್ ಪಾಸ್-ಬಲತಿರುವು ಸಿ.ಬಿ.ಐ ರಸ್ತೆ ಡೆಡ್ ಎಂಡ್-ಬಲತಿರುವು ಆರ್.ಟಿ.ನಗರ ಮುಖ್ಯರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್- ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.

4] ಬೆಂಗಳೂರು ನಗರದ ಕಡೆಯಿಂದ ಆರ್.ಟಿ.ನಗರ ಕಡೆಗೆ ಸಂಚರಿಸುವ ವಾಹನಗಳು ಅನುಸರಿಸಬೇಕಾದ
ಮಾರ್ಗಗಳು:

• ಮೇಕ್ರಿಸರ್ಕಲ್ ಅಂಡಪಾಸ್-ಬೆಂಗಳೂರು ಬಳ್ಳಾರಿ ರಸ್ತೆ-ಸಿ.ಬಿ.ಐ. ಅಂಡರ್ಪಾಸ್-ಬಲತಿರುವು-ಸಿ.ಬಿ.ಐ ರಸ್ತೆ ಡೆಡ್ ಎಂಡ್-ಬಲ ತಿರುವು, ಆರ್.ಟಿ.ನಗರ ಮುಖ್ಯರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್- ಎಡತಿರುವು ಪಡೆದು ದಿಣ್ಣೂರು ರಸ್ತೆಯ ಮೂಲಕ ಸಂಚರಿಸಬಹುದು.

ಈ ಮೇಲ್ಕಂಡ ಮುಖ್ಯರಸ್ತೆಗಳಲ್ಲಿ ದಿನಾಂಕಃ 24.10.2023 ರ ಸಂಜೆ 06,00 ಗಂಟೆಯಿಂದಪ್ರಾರಂಭಗೊಂಡುದಿನಾಂಕ: 25.10.2023 ರ ಬೆಳಿಗ್ಗೆ 08.00 ಗಂಟೆಯವರೆಗೆ ಈ ಸಂಚಾರ ಮಾರ್ಗದ ಮಾರ್ಪಾಡು ಜಾರಿಯಲ್ಲಿರುತ್ತದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular