HomeAutoವಾಹನ ಸವಾರರ ಗಮನಕ್ಕೆ : ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್

ವಾಹನ ಸವಾರರ ಗಮನಕ್ಕೆ : ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್

ಬೆಂಗಳೂರು : ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್ ಆಗಲಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಲಕ್ಕಸಂದ್ರ ಸುರಂಗದಲ್ಲಿನ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದಲ್ಲಿನ ಪ್ರವೇಶ ಕಾಮಗಾರಿ ನಡೆಯಲಿರುವ ಹಿನ್ನೆಲೆ ಬೆಂಗಳೂರಿನ ಬನ್ನೇರುಘಟ್ಟ ಮುಖ್ಯರಸ್ತೆ ಇಂದಿನಿಂದ ಒಂದು ವರ್ಷ ಬಂದ್ ಆಗಲಿದೆ . 2024 ಏಪ್ರಿಲ್ 1 ರಿಂದ 2025 ಮಾರ್ಚ್ 30 ತನಕ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಲಕ್ಕಸಂದ್ರ ಭೂಗತ ಮೆಟ್ರೋ ನಿಲ್ದಾಣದ ದಕ್ಷಿಣ ಭಾಗದ ಪ್ರವೇಶ ರಚನೆಯ ನಿರ್ಮಾಣಕ್ಕೆ ಅನುಕೂಲವಾಗುವಂತೆ ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಮೈಕೋ ಸಿಗ್ನಲ್ನಿಂದ ಆನೆಪಾಳ್ಯ ಜಂಕ್ಷನ್ವರೆಗೆ ಸಂಚರಿಸುವ ಉತ್ತರ ಭಾಗದ ಸಂಚಾರಕ್ಕೆ ಅನುಕೂಲವಾಗುವಂತೆ ಸಾರ್ವಜನಿಕರ ಗಮನಕ್ಕೆ ತರಲು BMRCL ಪ್ರಕಟಣೆಯಲ್ಲಿ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular