HomeKarnatakaರೈತ ಬಾಂಧವರೇ ಗಮನಿಸಿ : ಕೃಷಿ ಪಂಪ್ ಸೆಟ್ ಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ...

ರೈತ ಬಾಂಧವರೇ ಗಮನಿಸಿ : ಕೃಷಿ ಪಂಪ್ ಸೆಟ್ ಗೆ ವಿದ್ಯುತ್ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ : ಶಿವಮೊಗ್ಗ ತಾಲೂಕು ಗ್ರಾಮೀಣ ಉಪವಿಭಾಗ ಮೆಸ್ಕಾಂ ವ್ಯಾಪ್ತಿಗೆ ಒಳಪಡುವ ಅಬ್ಬಲಗೆರೆ, ಪಿಳ್ಳಂಗೆರೆ, ಹೊಳಲೂರು, ಗಾಜನೂರು ಮತ್ತು ಸಂತೇಕಡೂರು ಶಾಖಾ ವ್ಯಾಪ್ತಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರುವ ರೈತರು ಎಸ್.ಸಿ.ಪಿ. ಹಾಗ ಟಿ.ಎಸ್.ಪಿ ಯೋಜನೆಯಡಿ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸೌಲಭ್ಯ ಪಡೆಯಲು ಆರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಮೆಸ್ಕಾ ಕಚೇರಿಯಿಂದ ನಿಗಧಿತ ನಮೂನೆಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 07/07/2023ರೊಳಗಾಗಿ ಸಲ್ಲಿಸುವಂತೆ ಗ್ರಾ.ಉ.ವಿ. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯಗಳಿಗೆ ಆನ್ಲೈನ್ಅರ್ಜಿ ಆಹ್ವಾನ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಶಿವಮೊಗ್ಗದ ವಿವಿಧ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ(ಪಿಯುಸಿ ಮತ್ತು ಪಿಯುಸಿ ಸಮಾನಂತರ ಕೋರ್ಸ್) ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.

ಆಸಕ್ತರು ರಾಜ್ಯ ವಿದ್ಯಾರ್ಥಿ ನಿಲಯ ತಂತ್ರಾಂಶ https://shp.karnataka.gov.in ರ ಮೂಲಕ ಜುಲೈ 15 ರೊಳಗಾಗಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಉಪವಿಭಾಗ, 2ನೇ ಮಹಡಿ, ಹಳೆ ಡಿ.ಸಿ.ಕಚೇರಿ, ಶಿವಮೊಗ್ಗ, ದೂ.ಸಂ.: 08182-220206, ಶಿವಮೊಗ್ಗ ತಾಲೂಕು ವಿಸ್ತರಣಾಧಿಕಾರಿಗಳ ಕಚೇರಿ, 7795315517, ವಿಸ್ತರಣಾಧಿಕಾರಿಗಳು, ಸಾಗರ-9900132234, ಜಿಲ್ಲಾ ಮಾಹಿತಿಕೇಂದ್ರ, ಶಿವಮೊಗ್ಗ-7676888388, ತಾ. ಮಾ.ಕೇ, ಭದ್ರಾವತಿ-9538853680, ತೀರ್ಥಹಳ್ಳಿ-8861982835, ಶಿಕಾರಿಪುರ-7829136724, ಸಾಗರ-7338222907, ಸೊರಬ-9513815513, ಹೊಸನಗರ-9008447029 ಗಳನ್ನು ಸಂಪರ್ಕಿಸುವುದು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular