HomeKarnatakaಬೆಂಗಳೂರಿಗರೇ ಗಮನಿಸಿ : ನಾಳೆ, ನಾಡಿದ್ದು 'ಕಾವೇರಿ' ನೀರು ಪೂರೈಕೆಯಲ್ಲಿ ವ್ಯತ್ಯಯ..!

ಬೆಂಗಳೂರಿಗರೇ ಗಮನಿಸಿ : ನಾಳೆ, ನಾಡಿದ್ದು ‘ಕಾವೇರಿ’ ನೀರು ಪೂರೈಕೆಯಲ್ಲಿ ವ್ಯತ್ಯಯ..!

ಬೆಂಗಳೂರು ಜನತೆಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ನೀರು ಸರಬರಾಜು 5ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಕಾವೇರಿ ನೀರು ಸರಬರಾಜು ಘಟಕ ಸ್ಥಗಿತಗೊಳಿಸುತ್ತಿರುವುದರಿಂದ ಆ ದಿನಗಳಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಜೂನ್ 6 ರಂದು ಕಾವೇರಿ 1, 2 ಮತ್ತು 3 ನೇ ಹಂತಗಳ ನೀರು ಸರಬರಾಜು ಘಟಕಗಳನ್ನು 12 ಗಂಟೆಗಳ ಕಾಲ ಅಂದರೆ ಬೆಳಗ್ಗೆ 6 ರಿಂದ ಸಂಜೆ 6 ರ ವರೆಗೆ ಹಾಗೂ ಕಾವೇರಿ ನಾಲ್ಕನೇ ಹಂತ, 1 ಮತ್ತು 2ನೇ ಹಂತ ನೀರು ಸರಬರಾಜು ಘಟಕಗಳನ್ನು ನಾಲ್ಕು ಗಂಟೆಗಳ ಕಾಲ (ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ) ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ.ಈ ಹಿನ್ನೆಲೆಯಲ್ಲಿ ಜೂನ್ 6 ಮತ್ತು ಮರುದಿನ ಅಂದರೆ ಜೂನ್ 7ರಂದು ಎರಡು ದಿನಗಳ ಕಾಲ ಬೆಂಗಳೂರು ನೀರು ನಗರದ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಮೊದಲು ಜೂನ್ 4 ರಂದು ಈ ಕಾರ್ಯವನ್ನು ಕೈಗೊಳ್ಳಲು ಸಿದ್ಧತೆ ನಡೆಸಲಾಗಿದ್ದು, ಆದರೆ ಕಾರಣಾಂತರಗಳಿಂದ ಇದನ್ನು ಜೂನ್ 6ಕ್ಕೆ ಮುಂದೂಡಲಾಗಿದೆ. ಹೀಗಾಗಿ ಜೂನ್ 6 ಮತ್ತು 7ರಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗುವ ಕಾರಣ ಸಾರ್ವಜನಿಕರು ಸಹಕರಿಸಬೇಕೆಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿನಂತಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular