HomeLatest Newsಮದ್ಯದ ಅಮಲಲ್ಲಿ ಅಪ್ತಾಪ್ತೆ ಅಪಹರಣಕ್ಕೆ ಯತ್ನ: ಯೂಟ್ಯೂಬರ್ ವಶಕ್ಕೆ, ಮತ್ತೊಬ್ಬನಿಗೆ ಥಳಿತ

ಮದ್ಯದ ಅಮಲಲ್ಲಿ ಅಪ್ತಾಪ್ತೆ ಅಪಹರಣಕ್ಕೆ ಯತ್ನ: ಯೂಟ್ಯೂಬರ್ ವಶಕ್ಕೆ, ಮತ್ತೊಬ್ಬನಿಗೆ ಥಳಿತ

ಬೆಂಗಳೂರು: ಮದ್ಯದ ಮಲಿನಲ್ಲಿ ಅಪ್ರಾಪ್ತ ಯುವತಿಯ ಅಪಹರಣಕ್ಕೆ ಯತ್ನ ಆರೋಪ ಕೇಳಿ ಬಂದಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿನ್ನೆ ಮಧ್ಯರಾತ್ರಿ ಎರಡು ಗಂಟೆಯ ಸುಮಾರಿಗೆ ಪ್ರಕರಣ ನಡೆದಿದೆ. ಸಂಬಂಧಿಕರ ಮನೆಯಿಂದ ಅಪ್ರಾಪ್ತೆ ವಾಪಸ್ ಮನೆಗೆ ತೆರಳುತ್ತಿದ್ದಾಗ ಅಪಹರಣ ಮಾಡಲಾಗಿದೆ. ಮುಂಜಾನೆ 4 ಗಂಟೆಯವರೆಗೂ ಯುವಕರು ಕಾರ್ ನಲ್ಲಿ ಕೂರಿಸಿಕೊಂಡಿದ್ದರು. ಕುಟುಂಬದವರು ಹುಡುಕಾಟ ನಡೆಸಿದಾಗ ಕಾರ್ ನಲ್ಲಿ ಬಾಲಕಿ ಸಿಕ್ಕಿದ್ದಾಳೆ ಎನ್ನಲಾಗಿದೆ.

ನ್ಯೂ ಇಯರ್ ಸೆಲೆಬ್ರೇಶನ್ ಗೆ ಹಲವು ಯೂಟ್ಯೂಬರ್ ಗಳು ಬಂದಿದ್ದಾನೆ ಬಂದಿದ್ದಾರೆ. ಮಾಗಡಿ ತಾಲೂಕಿನ ಗ್ರಾಮವೊಂದರ ಸಮೀಪ ತೋಟದಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರ್ ನಲ್ಲಿದ್ದ ಓರ್ವ ಯುಟ್ಯೂಬರ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ. ತುಮಕೂರು ಮೂಲದ ರವಿಚಂದ್ರ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಪಾರ್ಟಿಯಲ್ಲಿ ಮಂಡ್ಯ ಮೂಲದ ಯೂಟ್ಯೂಬರ್ ಭಾಗವಹಿಸಿದ್ದ ಆರೋಪ ಕೇಳಿ ಬಂದಿದ್ದು, ಮಾಗಡಿ ಪೊಲೀಸ್ ಠಾಣೆಯ ಸಮೀಪ ಬಂದ ಆತನಿಗೆ ಸ್ಥಳೀಯರು ಥಳಿಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular