ಬೆಂಗಳೂರು : ಬೆಂಗಳೂರಿನಲ್ಲಿ ವಿದೇಶಿ ಯೂಟ್ಯೂಬರ್’ (foreign-youtuber) ಮೇಲೆ ಹಲ್ಲೆಗೆ ಯತ್ನ ನಡೆಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನೆದರ್ ಲ್ಯಾಂಡ್ ಪ್ರಜೆ ಪೆಟ್ರೋ ಮೊಟಾ ಎಂಬ ಯೂಟ್ಯೂಬರ್ ನನ್ನು ಚಿಕ್ಕಪೇಟೆಯಲ್ಲಿ ಸ್ಥಳೀಯ ವ್ಯಾಪಾರಿ ನವಾಬ್ ಎಂಬಾತ ಎಳೆದಾಡಿ ಹಲ್ಲೆ ನಡೆಸಲು ಯತ್ನಿಸಿದ್ದನು. ಸ್ಥಳೀಯರು ದೂಡಿದ ನೀರಿನ ಮೇರೆಗೆ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಪೇಟೆಯಲ್ಲಿ ವಿಡಿಯೋ ಶೂಟ್ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಎಳೆದಾಡಿ ಹಲ್ಲೆ ನಡೆಸಲಾಗಿದೆ.
ಪ್ರಕರಣ ಸಂಬಂಧ ಚಿಕ್ಕಪೇಟೆ ಪೊಲೀಸರು ನವಾಬ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ವ್ಯಾಪಾರಿ ನಡೆಗೆ ಆಕ್ರೋಶ ವ್ಯಕ್ತವಾಗಿದೆ.
#BreakingNews: Dutch YouTuber allegedly harassed in #Bengaluru
Activist Brinda Adige (@BrindaAdige) condemns the incident, says, "This is completely unacceptable. Police must take action against whoever was involved." #Karnataka | @reethu_journo, @anjalipandey06 pic.twitter.com/H5Amyh67fB
— News18 (@CNNnews18) June 12, 2023


