HomeKarnatakaಗಣಪತಿ ಪೆಂಡಾಲ್ ಬಳಿ ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿ ಕೊಲೆ ಯತ್ನ: ಮೂವರು ಅರೆಸ್ಟ್

ಗಣಪತಿ ಪೆಂಡಾಲ್ ಬಳಿ ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿ ಕೊಲೆ ಯತ್ನ: ಮೂವರು ಅರೆಸ್ಟ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ಸಿನಿಮೀಯ ಶೈಲಿಯಲ್ಲಿ ಕೊಲೆಗೆ ಯತ್ನ ನಡೆಸಲಾಗಿದೆ. ಲಾಂಗ್, ಮಚ್ಚುಗಳಿಂದ ಅಟ್ಟಾಡಿಸಿ ಜಿಮ್ ತರಬೇತುದಾರನ ಕೊಲೆಗೆ ಯತ್ನ ನಡೆದಿದೆ.

ನಗರದ ವಾಪಸಂದ್ರದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದ ಸ್ಥಳದ ಬಳಿಯೇ ಜಿಮ್ ಕೋಚರ್ ಬಿ.ಎನ್. ನರಸಿಂಹಮೂರ್ತಿ ಅಲಿಯಾಸ್ ವಿಕ್ಕಿ ಕೊಲೆಗೆ ಯತ್ನ ನಡೆಸಲಾಗಿದೆ. ಎಲ್.ಎಲ್.ಬಿ. ವಿದ್ಯಾರ್ಥಿ ಚಂದ್ರಶೇಖರ ಮತ್ತು ತಂಡದವರಿಂದ ಕೃತ್ಯ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆಂಡೂರು ನಿವಾಸಿ ಅರವಿಂದ್, ಹರೀಶ್, ಪ್ರಸಾದ್ ಸೇರಿದಂತೆ ಹಲವರು ಕೊಲೆಗೆ ಯತ್ನಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆಗೆ ಚಂದ್ರಶೇಖರ್ ಸುಫಾರಿ ನೀಡಿದ್ದ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಶೇಖರ್, ಪ್ರಸಾದ್ ಮತ್ತು ಅರವಿಂದ್ ಅವರನ್ನು ಬಂಧಿಸಲಾಗಿದೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular