ಬಳ್ಳಾರಿ: ಬಳ್ಳಾರಿ ಕೇಂದ್ರ ಕಾರಾಗೃಹ ಜೈಲರ್ ಮೇಲೆ ಹಲ್ಲೆ ನಡೆಸಿದ ಐವರ ವಿರುದ್ಧ ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಳ್ಳಾರಿಯ ಕೇಂದ್ರ ಕಾರಾಗೃಹದ ಜೈಲರ್ ಅಶೋಕ ಹೊಸಮನಿ ಅವರ ಮೇಲೆ ಕೈದಿಗಳು ಬುಧವಾರ ಹಲ್ಲೆ ಮಾಡಿದ್ದಾರೆ. ರಶೀದ್, ಸಲೀಂ, ವಿನೋದ್, ಅಲ್ತಾಫ್ ಮತ್ತು ರಾಜು ಎಂಬುವವರ ವಿರುದ್ಧ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಲ್ಲರೂ ದರೋಡೆ, ಹಲ್ಲೆ ಸೇರಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ,
ಕಾರಾಗೃಹದಲ್ಲಿ ಧೂಮಪಾನ ಸೇರಿ ಇತರೆ ಸೌಲಭ್ಯಗಳಿಗೆ ಗಲಾಟೆ ಕೈದಿಗಳು ಮಾಡುತ್ತಿದ್ದರು. ಜೈಲರ್ ಪ್ರಶ್ನಿಸಲು ಹೋಗಿದ್ದಾಗ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

