HomeIndia74 ವರ್ಷದ ಬಳಿಕ ಸೆಪ್ಟೆಂಬರ್‌ ನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಿಸಿದೆ ಈ ನಗರ...!

74 ವರ್ಷದ ಬಳಿಕ ಸೆಪ್ಟೆಂಬರ್‌ ನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಿಸಿದೆ ಈ ನಗರ…!

ಜೈಸಲ್ಮೇರ್​ನಲ್ಲಿ ಶನಿವಾರದಂದು 43.5 ಡಿಗ್ರಿ ಸೆಲ್ಸಿಯಸ್​ ಉಷ್ಣಾಂಶ ದಾಖಲಾಗಿದೆ. ಇದು ಕಳೆದ 74 ವರ್ಷಗಳಲ್ಲಿ ದಾಖಲಾದ ಸೆಪ್ಟೆಂಬರ್​ ತಿಂಗಳ ಅತ್ಯಂತ ಗರಿಷ್ಠ ತಾಪಮಾನವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಸಾರ್ವಕಾಲಿಕ ಗರಿಷ್ಠ ತಾಪಮಾನವು ಈ ಋತುಮಾನದಲ್ಲಿ ಇರುವ ಸಾಮಾನ್ಯ ತಾಪಮಾನಕ್ಕಿಂದ 6.9 ಡಿಗ್ರಿ ಸೆಲ್ಸಿಯಸ್​ ಹೆಚ್ಚಿದೆ ಎಂದು ತಿಳಿದು ಬಂದಿದೆ.

1949ರ ಸೆಪ್ಟೆಂಬರ್​ 10ರಂದು ಜೈಸಲ್ಮೇರ್​ನಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ 43.3 ಡಿಗ್ರಿ ಸೆಲ್ಸಿಯಸ್​ ದಾಖಲಾಗಿತ್ತು ಎಂದು ಹವಾಮನ ಇಲಾಖೆ ತಿಳಿಸಿದೆ. ಮರುಭೂಮಿಯ ಹಲವಾರು ಪ್ರದೇಶಗಳು ಶನಿವಾರದಂದು ತೀವ್ರ ಶಾಖದಿಂದ ತತ್ತರಿಸಿವೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಜೈಸಲ್ಮೇರ್​ ಹೊರತುಪಡಿಸಿದ್ರೆ ಬಾರ್ಮರ್​​ 40.3 ಡಿಗ್ರಿ ಸೆಲ್ಸಿಯಸ್​ ದಾಖಲಿಸಿದ ರಾಜ್ಯದ ಎರಡನೇ ಅತ್ಯಂತ ಶಾಖಯುತ ಸ್ಥಳ ಎನಿಸಿದೆ. ಇದಾದ ಬಳಿಕ ಬಿಕಾನೇರ್​ನಲ್ಲಿ 40 ಡಿಗ್ರಿ ಸೆಲ್ಸಿಯಸ್​​, ಜೋಧ್​ಪುರದಲ್ಲಿ 39.5 ಡಿಗ್ರಿ, ಜಾಲೋರ್​ನಲ್ಲಿ 38.7 ಡಿಗ್ರಿ ಹಾಗೂ ಗಂಗಾನಗರದಲ್ಲಿ 38.5 ಡಿಗ್ರಿ ಸೆಲ್ಸಿಯಸ್​ ತಾಪಮಾನ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular