HomeKarnatakaBIG NEWS : 'ನನಗೆ 80 ವರ್ಷ ಆಯಸ್ಸು' ಎಂದು ಜ್ಯೋತಿಷಿಗಳು ಹೇಳಿದ್ದಾರೆ :...

BIG NEWS : ‘ನನಗೆ 80 ವರ್ಷ ಆಯಸ್ಸು’ ಎಂದು ಜ್ಯೋತಿಷಿಗಳು ಹೇಳಿದ್ದಾರೆ : ಮಾಜಿ ಸಿಎಂ HDK

ಮಂಡ್ಯ : ನನಗೆ 80 ವರ್ಷ ಆಯಸ್ಸು  ಎಂದು ಜ್ಯೋತಿಷಿಗಳು ಹೇಳಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ( H.D Kumaraswamy)  ಹೇಳಿದರು.

ಮಂಡ್ಯದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ”ನನಗೆ 80 ವರ್ಷ ಆಯಸ್ಸು ಮಾತ್ರ, ಮಾ.21 ಕ್ಕೆ ನಮಗೆ ಆಪರೇಷನ್ ಇದೆ.  ಮಾರ್ಚ್ 25 ಕ್ಕೆ ಮಂಡ್ಯಕ್ಕೆ ಬಂದು ಅಭ್ಯರ್ಥಿ ಘೋಷಣೆ ಮಾಡುತ್ತೇನೆ. ನನಗೆ 80 ವರ್ಷ ಆಯಸ್ಸು  ಎಂದು ಜ್ಯೋತಿಷಿಗಳು ಹೇಳಿದ್ದಾರೆ…ಅಷ್ಟು ಬೇಗ ಈ ಜೀವ ಮಣ್ಣಿಗೆ ಹೋಗುವುದಿಲ್ಲ, ಜನ ಸರ್ಟಿಫಿಕೇಟ್ ನೀಡಿದ ಮೇಲೆಯೇ ಈ ಜೀವ ಮಣ್ಣಿಗೆ ಹೋಗುವುದು, ಜನರ ರುಣ ತೀರಿಸಿದ ಮೇಲೆಯೇ ಈ ಜೀವ ಮಣ್ಣಿಗೆ ಹೋಗುವುದು” ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

”ಮಂಡ್ಯ ಸಂಸದೆ ಸುಮಲತಾ ತನ್ನ ಸ್ವಂತ ಅಕ್ಕ, ಅವರ ಜೊತೆ ಸಂಘರ್ಷ ಮುಂದುವರೆಸಿಕೊಂಡು ಹೋಗಲ್ಲ ಎಂದರು. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಲವು ಗೊಂದಲ ಇತ್ತು, ಅದಕ್ಕೆ ನಾನೇ ಪ್ರಚಾರಕ್ಕೆ ಹೋಗಿ ತೆರೆ ಎಳೆದೆ ಎಂದರು. ಮಂಡ್ಯ ಅಭ್ಯರ್ಥಿ ಘೋಷಣೆ ಮಾಡದ ಬಗ್ಗೆ ಕಾರ್ಯಕರ್ತರಲ್ಲಿ ಗೊಂದಲವಿದೆ. ಮಂಡ್ಯ ಕ್ಷೇತ್ರ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಭಾವನೆ ಹಲವರಲ್ಲಿದೆ, ಇಂದಿನ ಸಭೆಯಲ್ಲಿ ನಾವು ಸಂದೇಶ ಕೊಡುವುದಕ್ಕಿಂತ ನೀವೇ ಕೊಟ್ಟಿದ್ದೀರಿ” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular