HomeIndiaಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿರಿಯ ಸರ್ಕಾರಿ ನೌಕರ

ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಹಿರಿಯ ಸರ್ಕಾರಿ ನೌಕರ

ಹಿರಿಯ ಸರ್ಕಾರಿ ನೌಕರನೊಬ್ಬ ಲಂಚ ಪಡೆಯುವಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಅಸ್ಸಾಂನ ಗೌಹಾತಿಯ ಚಂದ್ಮರಿಯಲ್ಲಿ ನಡೆದಿದೆ. ಈತನನ್ನು ಅಸ್ಸಾಂ ಭ್ರಷ್ಟಾಚಾರ ವಿರೋಧಿ ದಳ ಬಂಧಿಸಿದೆ.

ದೀಪ್ ಬನಿಯ ಎಂಬ ಈ ಉದ್ಯೋಗಿ ನೀರಾವರಿ ಇಲಾಖೆ ಚೀಫ್ ಇಂಜಿನಿಯರ್ ಕಚೇರಿಯಲ್ಲಿ ಹಿರಿಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದು, ಲಂಚ ಪಡೆಯುವಾಗ ಹಣದ ಸಮೇತ ಸಿಕ್ಕಿಬಿದ್ದಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈತನ ವಿರುದ್ಧ ವಿವಿಧ ಕಲಂ ಗಳಡಿ ಪ್ರಕರಣ ದಾಖಲಿಸಲಾಗಿದ್ದು, ಈತನೊಬ್ಬನೇ ಈ ಕೃತ್ಯದಲ್ಲಿ ತೊಡಗಿಕೊಂಡಿದ್ದಾನಾ ಅಥವಾ ಯಾರ ಪರವಾಗಿಯಾದರೂ ಹಣ ಸ್ವೀಕರಿಸಿದ್ದಾನಾ ಎಂಬುದರ ತನಿಖೆ ನಡೆಯುತ್ತಿದೆ.

For Latest News Updates, Join Our Whatsapp Community🚩
RELATED ARTICLES

Most Popular