HomeKarnatakaBIG NEWS: ಅಸ್ಸಾಂ ನಿಂದ ಬೆಂಗಳೂರೂಗೆ ಬಂದು ಕಳ್ಳತನ; ಸಿಎಂ ನಿವಾಸದ ಬಳಿಯ ಮನೆಗಳೇ ಟಾರ್ಗೆಟ್;...

BIG NEWS: ಅಸ್ಸಾಂ ನಿಂದ ಬೆಂಗಳೂರೂಗೆ ಬಂದು ಕಳ್ಳತನ; ಸಿಎಂ ನಿವಾಸದ ಬಳಿಯ ಮನೆಗಳೇ ಟಾರ್ಗೆಟ್; ಆರೋಪಿ ಅರೆಸ್ಟ್

ಬೆಂಗಳೂರು: ಅಸ್ಸಾಂ ನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಆರೋಪಿಯನ್ನು ಬೆಂಗಳೂರಿನ ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರದೀಪ್ ಬಂಧಿತ ಆರೋಪಿ. ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ. ಕಳ್ಳತನ ಮಾಡಲೆಂದೇ ಅಸ್ಸಾಂ ನಿಂದ ಬೆಂಗಳೂರಿಗೆ ಆಗಾಗ ರೈಲಿನಲ್ಲಿ ಬರುತ್ತಿದ್ದ.

ಅಸ್ಸಾಂ ನಿಂದ ಬೆಂಗಳೂರಿಗೆ ಬಂದು ಮೆಜೆಸ್ಟಿಕ್ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿ ಹಗಲಿನಲ್ಲಿ ಮಾರ್ವಾಡಿ ಮನೆಗಳ ಸುತ್ತಮುತ್ತ ಓಡಾಡುತ್ತಿದ್ದ. ರಾತ್ರಿ ಕಳ್ಳತನ ಮಾಡುತ್ತಿದ್ದ. ಇದೇ ರೀತಿ ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ನಿವಾಸದಿಂದ ಕೂಗಳತೆ ದೂರದಲ್ಲಿರುವ ಮನೆಯೊಂದರ ಕಿಟಕಿಯಿಂದ ಎಂಟ್ರಿಯಾಗಿ 2.1 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಚಿನ್ನಾಭರಣ ಕದ್ದ ಹಣದಲ್ಲಿ ಅಸ್ಸಾಂಗೆ ತೆರಳಿ ಕಾರು ಖರೀದಿಸಿದ್ದ. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಕಳ್ಳನ ಕೈಚಳಕ ಬೆಳಕಿಗೆ ಬಂದಿದೆ. ಲಾಡ್ಜ್ ನ ಲೆಡ್ಜರ್ ಬುಕ್ ನಲ್ಲಿಯೂ ಎಂಟ್ರಿ ಮಾಡದೇ ಕಳ್ಳಾಟ ನಡೆಸಿದ್ದಾನೆ. ಶೇಷಾದ್ರಿಪುರಂ, ಸದಾಶಿವನಗರಗಳಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular