HomeEntertainment'ಬ್ರಿಟನ್ಸ್ ಗಾಟ್ ಟ್ಯಾಲೆಂಟ್' ಶೋನಲ್ಲಿ ಅಸ್ಸಾಂ ಬಾಲಕಿ ಅದ್ಭುತ ಡ್ಯಾನ್ಸ್ ಗೆ ವೀಕ್ಷಕರು, ತೀರ್ಪುಗಾರರು ಫಿದಾ:...

‘ಬ್ರಿಟನ್ಸ್ ಗಾಟ್ ಟ್ಯಾಲೆಂಟ್’ ಶೋನಲ್ಲಿ ಅಸ್ಸಾಂ ಬಾಲಕಿ ಅದ್ಭುತ ಡ್ಯಾನ್ಸ್ ಗೆ ವೀಕ್ಷಕರು, ತೀರ್ಪುಗಾರರು ಫಿದಾ: ಸಿಎಂ ಹಿಮಂತ್ ಶರ್ಮಾ, ಉದ್ಯಮಿ ಆನಂದ್ ಮಹೀಂದ್ರಾ ಸೇರಿ ಗಣ್ಯರಿಂದ ಮೆಚ್ಚುಗೆ

ಬ್ರಿಟನ್ಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋನಲ್ಲಿ ಅಸ್ಸಾಂ ಮೂಲದ 8 ವರ್ಷದ ಬಿನಿತಾ ಚಿಟ್ರಿ ಎಂಬ ಬಾಲಕಿ ಅದ್ಭುತ ನೃತ್ಯ ಪ್ರದರ್ಶನ ನೀಡಿ ನೋಡುಗರ ಮನೆಗೆದ್ದಿದ್ದಾಳೆ.

ಒಂದು ಹಂತದಲ್ಲಿ ತೀರ್ಪುಗಾರರು ಮತ್ತು ವೀಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಬಿನಿತಾ ಡ್ಯಾನ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಉದ್ಯಮಿ ಆನಂದ ಮಹಿಂದ್ರಾ ಸೇರಿದಂತೆ ಹಲವು ಗಣ್ಯರು ವಿನಿತ ಅವರ ಡ್ಯಾನ್ಸ್ ವಿಡಿಯೋ ಹಂಚಿಕೊಂಡು ಅದ್ಭುತ ಪ್ರತಿಭೆ ಎಂದು ಶ್ಲಾಘಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತೀರ್ಪುಗಾರರಲ್ಲಿ ಒಬ್ಬರಾದ ಡೇವಿಡ್ ವಿಲಿಯಮ್ಸ್ ಅವರು, ಈ ಶೋಗೆ ಏಕೆ ಬಂದೇ ಎಂದು ಪ್ರಶ್ನಿಸಿದಾಗ, ಬ್ರಿಟನ್ಸ್ ಗಾಟ್ ಟ್ಯಾಲೆಂಟ್ ಶೋನಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲುವುದು ನನ್ನ ಕನಸಾಗಿದೆ. ಇಲ್ಲಿ ಗೆದ್ದ ದುಡ್ಡಿನಿಂದ ಪಿಂಕ್ ಪ್ರಿನ್ಸೆಸ್ ಹೌಸ್ ಖರೀದಿಸಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದು ಬಿನಿತಾ ಹೇಳಿದ್ದು, ಎಲ್ಲರೂ ಆಕೆಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.

 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular