ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಹಾಗೂ ಉದ್ಯಮಿ ಅರವಿಂದ್ ರೆಡ್ಡಿ ನಡುವಿನ ನಂಟು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಅರವಿಂದ್ ರೆಡ್ಡಿ ತಾನು ನಟಿಗೆ ಕೊಡಿಸಿರುವ ದುಬಾರಿ ಉಡುಗೊರೆಗಳ ಬಗ್ಗೆ ಹಾಗೂ ನಟಿಯೊಂದಿಗಿನ ಕೆಲ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.
ಸ್ಯಾಂಡಲ್ ವುಡ್ ನಟಿ, ಉದ್ಯಮಿ ಅರವಿಂದ್ ರೆಡ್ದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಕಿರುಕುಳ ಆರೋಪ ಮಾಡಿದ್ದರು. ಅಲ್ಲದೇ ಅವರು ನೀಡಿದ್ದ ಲಕ್ಷಾಂತರ ರೂಪಾಯಿ ಗಿಫ್ಟ್ ಗಳನ್ನು ಸಂಬಂಧ ಮುರಿದುಕೊಂಡಾಗಲೇ ವಾಪಸ್ ಕೊಟ್ಟಿದ್ದಾಗಿ ತಿಳಿಸಿದ್ದರು. ಈ ಪ್ರಕರಣ ಕೆಲ ದಿನಗಳ ಹಿಂದೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಸುದ್ದಿ ತಣ್ಣಗಾಗಿದೆ ಎನ್ನುವಾಗಲೇ ಇದೀಗ ಅರವಿಂದ್ ರೆಡ್ಡಿ ಹಾಗೂ ನಟಿಯ ಹಿಂದಿನ ಕೆಲ ಫೋಟೋಗಳು ವೈರಲ್ ಆಗಿವೆ. ಅಲ್ಲದೇ ಅರವಿಂದ್ ರೆಡ್ಡಿ ಕೊಡಿಸಿರುವ ದುಬಾರಿ ಗಿಫ್ಟ್ ಗಳ ಬಿಲ್, ಫ್ಲೈಟ್ ಟಿಕೆಟ್ ಹಣ ಪಾವತಿಸಿರುವ ಲಿಸ್ಟ್ ಗಳು ಮತ್ತೆ ಚರ್ಚೆಗೆ ಕಾರಣವಾಗಿವೆ.
ಅರವಿಂದ್ ರೆಡ್ಡಿ, ನಟಿಯೊಂದಿಗೆ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದಾಗ ನಟಿಗೆ ದುಬಾರಿ ಕಾರು ಮಾತ್ರವಲ್ಲದೇ 7 ಲಕ್ಷದ ಟಿವಿ, 10 ಲಕ್ಷ ಮೌಲ್ಯದ ಫರ್ನಿಚರ್, 33 ಸಾವಿರ ಮೌಲ್ಯದ ಡೈನಿಂಗ್ ಸೆಟ್, 1.30 ಲಕ್ಷ ಮೌಲ್ಯದ ಬೆಡ್, 15 ಲಕ್ಷ ಮೌಲ್ಯದ ಚಿನ್ನಾಭರಣ ಸೇರಿದಂತೆ ಲಕ್ಷ ಲಕ್ಷ ಬೆಲೆ ಬಾಳುವ ವಸ್ತುಗಳನ್ನು ನೀಡಿದ್ದಾರೆ ಎನ್ನಲಾಗಿದೆ.

