HomeLatest Newsಕಾಫಿ ಪ್ರಿಯರಿಗೆ ಗುಡ್ ನ್ಯೂಸ್: ಹೃದಯದ ಆರೋಗ್ಯಕ್ಕೆ ಕಾಫಿ ಸೂಪರ್, ಎನರ್ಜಿ ಡ್ರಿಂಕ್ಸ್ ಡೇಂಜರ್!

ಕಾಫಿ ಪ್ರಿಯರಿಗೆ ಗುಡ್ ನ್ಯೂಸ್: ಹೃದಯದ ಆರೋಗ್ಯಕ್ಕೆ ಕಾಫಿ ಸೂಪರ್, ಎನರ್ಜಿ ಡ್ರಿಂಕ್ಸ್ ಡೇಂಜರ್!

ದೇಹಕ್ಕೆ ತಕ್ಷಣ ಶಕ್ತಿ ನೀಡಲು ಕಾಫಿ ಅಥವಾ ಎನರ್ಜಿ ಡ್ರಿಂಕ್ಸ್ ಕುಡಿಯುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಎರಡರಲ್ಲೂ ಕೆಫೀನ್ ಪ್ರಮಾಣ ಇರುತ್ತದೆಯಾದರೂ, ಇವು ನಮಗೆ ನೀಡುವ ಆರೋಗ್ಯ ಪರಿಣಾಮಗಳು ಸಂಪೂರ್ಣವಾಗಿ ಭಿನ್ನವಾಗಿವೆ. ಈ ಕುರಿತು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ನಡೆಸಿದ ಇತ್ತೀಚಿನ ಜಾಗತಿಕ ಅಧ್ಯಯನವೊಂದು ಆಸಕ್ತಿಕರ ಸಂಗತಿಗಳನ್ನು ಬಹಿರಂಗಪಡಿಸಿದೆ.

ನಿಯಮಿತವಾಗಿ ಮಿತ ಪ್ರಮಾಣದಲ್ಲಿ ಕಾಫಿ ಸೇವಿಸುವುದರಿಂದ ಹೃದಯದ ಆರೋಗ್ಯ ವೃದ್ಧಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಪ್ರತಿದಿನ 400 ಮಿಲಿಗ್ರಾಂವರೆಗಿನ ಕೆಫೀನ್, ಅಂದರೆ ಸುಮಾರು ನಾಲ್ಕರಿಂದ ಐದು ಕಪ್ ಸಾಮಾನ್ಯ ಕಾಫಿ ಸೇವನೆ ಸಂಪೂರ್ಣ ಸುರಕ್ಷಿತ. ಯಾವುದೇ ಅಧಿಕ ಸಕ್ಕರೆ ಅಥವಾ ಕೆನೆ ಸೇರಿಸದೇ ಕುಡಿಯುವ ಕಾಫಿಯು ಹೃದಯಾಘಾತ, ಪಾರ್ಶ್ವವಾಯು, ಶೇಕಡಾ ಎರಡರಷ್ಟು ಮಧುಮೇಹ ಮತ್ತು ಹೃದಯ ಬಡಿತದ ಏರುಪೇರಿನಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಕಾಫಿಯಲ್ಲಿರುವ ಆಂಟಿಆಕ್ಸಿಡೆಂಟ್ ಹಾಗೂ ಪಾಲಿನೊಲ್ಸ್ ಸಂಯುಕ್ತಗಳು ರಕ್ತನಾಳಗಳ ಉರಿಯೂತವನ್ನು ತಡೆದು ರಕ್ತಸಂಚಾರವನ್ನು ಸುಗಮಗೊಳಿಸುತ್ತವೆ.

ಆದರೆ, ಇತ್ತೀಚೆಗೆ ಯುವಜನತೆಯಲ್ಲಿ ಪ್ರಸಿದ್ಧಿ ಪಡೆಯುತ್ತಿರುವ ಎನರ್ಜಿ ಡ್ರಿಂಕ್ಸ್ ಸೇವನೆ ಆರೋಗ್ಯಕ್ಕೆ ತೀವ್ರ ಹಾನಿಕರ ಎಂದು ವರದಿ ಎಚ್ಚರಿಸಿದೆ. ಇವುಗಳಲ್ಲಿ ಅತಿಯಾದ ಕೆಫೀನ್ ಜೊತೆಗೆ ಅಪಾರ ಪ್ರಮಾಣದ ಸಕ್ಕರೆ ಮತ್ತು ಇತರ ಉದ್ರೇಕಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಕ್ಷಣಮಾತ್ರದಲ್ಲಿ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ತೀವ್ರವಾಗಿ ಹೆಚ್ಚಿಸುತ್ತದೆ. ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ಉಂಟಾಗುವ ಈ ಏರಿಳಿತವು ಯುವಕರಲ್ಲೂ ಸಹ ಹೃದಯ ಸಂಬಂಧಿ ತೊಂದರೆಗಳಿಗೆ ಕಾರಣವಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾನ್ಯವಾಗಿ ಕಾಫಿ ಕುಡಿದ ತಕ್ಷಣ ತಾತ್ಕಾಲಿಕವಾಗಿ ರಕ್ತದೊತ್ತಡ ತುಸು ಏರಿದರೂ, ಧೀರ್ಘಾವಧಿಯಲ್ಲಿ ಅದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವುದಿಲ್ಲ. ಆದರೆ ಎನರ್ಜಿ ಡ್ರಿಂಕ್ಸ್‌ನಲ್ಲಿರುವ ಸಂಕೀರ್ಣ ರಾಸಾಯನಿಕಗಳ ಮಿಶ್ರಣವು ಹೃದಯದ ಮೇಲೆ ಅನಗತ್ಯ ಒತ್ತಡವನ್ನು ಹೇರುತ್ತದೆ. ಹೀಗಾಗಿ, ಸಕ್ಕರೆ ರಹಿತ ಶುದ್ಧ ಕಾಫಿ ಸೇವನೆ ದೇಹಕ್ಕೆ ಉತ್ತಮವಾಗಿದ್ದು, ಕೃತಕ ಶಕ್ತಿ ನೀಡುವ ಎನರ್ಜಿ ಡ್ರಿಂಕ್ಸ್‌ಗಳಿಂದ ದೂರವಿರುವುದೇ ಕ್ಷೇಮ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular