HomeLatest Newsವಿದ್ಯಾರ್ಥಿಗಳ ಹೋರಾಟಕ್ಕೆ 'ಅಣ್ಣಾ ಹಜಾರೆ' ಬೆಂಬಲ ; ಮೌನಾಂದೋಲನ ನಡೆಸಿ ಕಣ್ಣೀರಿಟ್ಟ ಹಿರಿಯ ಹೋರಾಟಗಾರ |WATCH...

ವಿದ್ಯಾರ್ಥಿಗಳ ಹೋರಾಟಕ್ಕೆ ‘ಅಣ್ಣಾ ಹಜಾರೆ’ ಬೆಂಬಲ ; ಮೌನಾಂದೋಲನ ನಡೆಸಿ ಕಣ್ಣೀರಿಟ್ಟ ಹಿರಿಯ ಹೋರಾಟಗಾರ |WATCH VIDEO

ಅಹಿಲ್ಯಾನಗರ (ಮಹಾರಾಷ್ಟ್ರ) : ಅಣ್ಣಾ ಹಜಾರೆ  ಭಾರತದ ಪ್ರಮುಖ ಸಮಾಜಸೇವಕ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರರಲ್ಲಿ ಒಬ್ಬರು. ತಮ್ಮ ಸರಳ ಜೀವನ, ಗಾಂಧಿವಾದಿ ತತ್ವಗಳು ಮತ್ತು ಜನಪರ ಹೋರಾಟಗಳ ಮೂಲಕ ದೇಶಾದ್ಯಂತ ಅಪಾರ ಗೌರವ ಗಳಿಸಿದ್ದಾರೆ. ಗ್ರಾಮೀಣಾಭಿವೃದ್ಧಿ, ಪಾರದರ್ಶಕ ಆಡಳಿತ ಮತ್ತು ಜನಜಾಗೃತಿಗಾಗಿ ಅವರು ಹಲವು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದೀಗ ಅಣ್ಣಾ ಹಜಾರೆ   ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ, ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಗುರುವಾರ ಮಹಾರಾಷ್ಟ್ರದ ಅಹಿಲ್ಯಾನಗರದಲ್ಲಿ ಎರಡು ಗಂಟೆಗಳ ಕಾಲ ಮೌನಾಂದೋಲನ ನಡೆಸಿದರು.

ಮಹಾರಾಷ್ಟ್ರದ ಶಿರಡಿಯಲ್ಲಿರುವ ವಾಡಿಯಾ ಪಾರ್ಕ್‌ನ ಗಾಂಧಿ ಸ್ಮಾರಕದ ಬಳಿ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ ಆಯೋಜಿಸಿದ್ದ ಮೌನ ಪ್ರತಿಭಟನೆಯಲ್ಲಿ ಹಿರಿಯ ಸಮಾಜ ಸೇವಕ ಅಣ್ಣಾ ಹಜಾರೆ ಭಾಗವಹಿಸಿದರು.ಬೆಳಿಗ್ಗೆ 11 ಗಂಟೆಗೆ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ಆರಂಭಿಸಿದ ಅಣ್ಣಾ ಹಜಾರೆ, ಮಧ್ಯಾಹ್ನ 1 ಗಂಟೆಗೆ ಅದನ್ನು ಮುಕ್ತಾಯಗೊಳಿಸಿ ತಮ್ಮ ಸ್ವಗ್ರಾಮ ರಾಲೇಗಣ್ ಸಿದ್ಧಿಗೆ ತೆರಳಿದರು. ಇದಕ್ಕೂ ಮುನ್ನ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಅಣ್ಣಾ ಹಜಾರೆ, ದೆಹಲಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಮತ್ತು ಪೊಲೀಸ್ ಕ್ರಮಗಳು ಅತ್ಯಂತ ನೋವುಂಟು ಮಾಡಿವೆ ಎಂದು ತಿಳಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದರೂ ವಿದ್ಯಾರ್ಥಿಗಳಿಗೆ ತಮ್ಮ ನೈತಿಕ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಅಣ್ಣಾ ಹಜಾರೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಆದರೆ ಆರೋಗ್ಯದ ಸಮಸ್ಯೆಯಿಂದಾಗಿ ಸ್ವಲ್ಪ ಸಮಯದ ಬಳಿಕವೇ ಅವರು ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಬೇಕಾಯಿತು.ಈ ವೇಳೆ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾ ಅಣ್ಣಾ ಹಜಾರೆ ಭಾವುಕರಾದರು. ಅವರು ತೆರಳಿದ ಬಳಿಕವೂ ಮೌನ ಪ್ರತಿಭಟನೆ ಮುಂದುವರಿಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿಭಟನಾಕಾರರ ಅಸಮಾಧಾನವನ್ನು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ನೋಡದೇ, ಸಮಾಜದ ನೋವು ಮತ್ತು ನಿರೀಕ್ಷೆಗಳ ಪ್ರತಿಬಿಂಬವಾಗಿ ಪರಿಗಣಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.ಇದೇ ವೇಳೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರೆ ಸರ್ಕಾರ ಬೀಳುವುದಿಲ್ಲ. ಬದಲಿಗೆ ಸರ್ಕಾರದ ಕಾರ್ಯವೈಖರಿ ಇನ್ನಷ್ಟು ಜವಾಬ್ದಾರಿಯುತ ಮತ್ತು ಪರಿಣಾಮಕಾರಿಯಾಗಲಿದೆ ಎಂದು ಹಜಾರೆ ಅಭಿಪ್ರಾಯಪಟ್ಟಿದ್ದಾರೆ.ವಿದ್ಯಾರ್ಥಿಗಳ ಬೇಡಿಕೆಗಳನ್ನು ಸರ್ಕಾರ ತಾಳ್ಮೆಯಿಂದ ಆಲಿಸಿ, ವಿಶ್ವಾಸದ ವಾತಾವರಣ ನಿರ್ಮಿಸಿ, ಸಕಾರಾತ್ಮಕ ಸಂವಾದದ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಮನವಿ ಮಾಡಿದ್ದಾರೆ. “ಪ್ರಧಾನಮಂತ್ರಿಯವರು ದೇಶದ ಅತ್ಯುನ್ನತ ನಾಯಕರು. ಜನರ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸುವುದು ನನ್ನ ಕರ್ತವ್ಯ” ಎಂದು ಹೇಳಿದ್ದಾರೆ.

ಅಣ್ಣಾ ಹಜಾರೆ ಅವರು ಗಾಂಧಿವಾದಿ ತತ್ವಗಳನ್ನು ಅನುಸರಿಸುತ್ತಾ ಭ್ರಷ್ಟಾಚಾರ ವಿರೋಧ, ಗ್ರಾಮೀಣಾಭಿವೃದ್ಧಿ, ಪಾರದರ್ಶಕ ಆಡಳಿತ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟ ನಡೆಸುತ್ತಿರುವ ಹಿರಿಯ ಸಮಾಜಸೇವಕರಾಗಿದ್ದಾರೆ. ಅವರ ಹೋರಾಟಗಳು ದೇಶದ ನಾಗರಿಕ ಸಮಾಜದ ಮೇಲೆ ಮಹತ್ವದ ಪ್ರಭಾವ ಬೀರಿವೆ.


For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular