ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅದರಲ್ಲೂ ಹೆಚ್ಚಾಗಿ ತಮಿಳು ಹಾಗೂ ಕನ್ನಡದಲ್ಲಿ ಮಿಂಚಿದ ನಟ ಅರ್ಜುನ್ ಸರ್ಜಾ ಸದ್ಯ ನಿರ್ದೇಶಕನಾಗಿ ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ಇನ್ನು ಇದರ ನಡುವೆ ಪೋಷಕ ಪಾತ್ರಗಳಲ್ಲಿಯೂ ನಟನೆ ಮಾಡುತ್ತಿದ್ದ ಅರ್ಜುನ್ ಸರ್ಜಾ ಇತ್ತೀಚೆಗಷ್ಟೆ ಬಿಡುಗಡೆಯಾದ ತಮಿಳಿನ ಬ್ಲಾಸ್ಟ್ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ನಾಯಕನಾಗಿ ನಟಿಸಿ ಅಬ್ಬರಿಸಿದ್ದಾರೆ.
ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಪ್ರಶ್ನಿಸಿ, ಸಂತ್ರಸ್ತರು ಯಾರೇ ಆಗಿದ್ದರೂ ನ್ಯಾಯ ಕೊಡಿಸಬೇಕು ಎಂದು ತನ್ನ ಮಗಳನ್ನು ಬೆಳೆಸುವ ಅರ್ಜುನ್ ಸರ್ಜಾ ನಂತರ ಅದೇ ಮಾತಿನಿಂದ ತನ್ನ ಕುಟುಂಬದ ಜತೆ ಏನೆಲ್ಲ ಇಕ್ಕಟ್ಟಿಗೆ ಸಿಲುಕಿಕೊಳ್ಳುತ್ತಾರೆ ಹಾಗೂ ಅದನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುದೇ ಚಿತ್ರದ ಕಥೆ.
ಆಕ್ಷನ್ ಎಂಟರ್‌ಟೈನರ್ ಆಗಿರುವ ಬ್ಲಾಸ್ಟ್ ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದು, 18 ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ 68 ಕೋಟಿ ಗಳಿಕೆಯನ್ನು ಮಾಡಿದೆ.
ಹೀಗೆ ಬಾಕ್ಸ್ ಆಫೀಸ್‌ನಲ್ಲಿ ಬಹು ದಿನಗಳ ಬಳಿಕ ತನ್ನ ಚಿತ್ರವೊಂದು ದೊಡ್ಡ ಕಲೆಕ್ಷನ್ ಮಾಡಿರುವ ಬಗ್ಗೆ ಅರ್ಜುನ್ ಸರ್ಜಾ ಗಲಾಟಾ ಪ್ಲಸ್ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿ ಸಂತಸ ಹೊರಹಾಕಿದರು. ಹಾಗೆಯೇ ಚಿತ್ರರಂಗದಲ್ಲಿ ಇರುವ ನಕಲಿ ಕಲೆಕ್ಷನ್ ರಿಪೋರ್ಟ್ ಗೀಳಿನ ಬಗ್ಗೆ ಸಹ ದೂರಿದರು.
ಚಿತ್ರರಂಗದಲ್ಲಿ ದೊಡ್ಡ ಕಲೆಕ್ಷನ್ ಆಗದಿದ್ದರೂ ದೊಡ್ಡ ಸಂಖ್ಯೆಗಳನ್ನು ಪ್ರಕಟಿಸಿ ಇಷ್ಟು ಗಳಿಕೆಯಾಗಿದೆ ಎಂದು ನಕಲಿ ಪೋಸ್ಟರ್ ಹರಿಬಿಡುವ ಟ್ರೆಂಡ್ ಸೃಷ್ಟಿಯಾಗಿದೆ ಎಂಬುದನ್ನು ಹಂಚಿಕೊಂಡರು. ಅದಕ್ಕೆ ತಮ್ಮದೇ ನಿರ್ದೇಶನದ ಸೀತಾ ಪಯಣಂ ಚಿತ್ರವನ್ನು ಉದಾಹರಣೆಯನ್ನಾಗಿ ನೀಡಿದ ಅರ್ಜುನ್ ಸರ್ಜಾ ಯಾರೋ ಒಬ್ಬ ಬಂದ, ಇಷ್ಟು ಕೋಟಿ ಕಲೆಕ್ಷನ್ ಆಗಿದೆ ಎಂದು ಸುಮ್ಮನೆ ಪೋಸ್ಟರ್ ಬಿಡಿ ಸರ್, ಒಳ್ಳೆಯ ಪ್ರಚಾರವಾಗುತ್ತೆ ಎಂದ, ನಾನು ಅಷ್ಟು ಕಲೆಕ್ಷನ್ ಆಗಲ್ಲ ಎಂದಮೇಲೆ ಏಕೆ ಆಗಬೇಕು ಹೋಗೋ ನನ್ ಮಗ್ನೆ ಎಂದು ಉಗಿದು ಕಳುಹಿಸಿದೆ ಎಂದು ತಿಳಿಸಿದರು.
link: https://www.instagram.com/reel/DZmqytPS28I/?igsh=MXgwdjgxazBxNnk4cw==

