HomeLatest News'ಅರಿಂದಮ್' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

‘ಅರಿಂದಮ್’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್

ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕಲ್ಕಿ ಅಗಸ್ತ್ಯ ಅಭಿನಯದ ‘ಅರಿಂದಮ್’ ಚಿತ್ರದ ಮೋಷನ್ ಪೋಸ್ಟರ್ ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಮೋಶನ್ ಪೋಸ್ಟರ್ ಗೆ ಸಾಕಷ್ಟು ಮೆಚ್ಚುಗೆ ದೊರೆತಿದ್ದು, ಕಲ್ಕಿ ಅಗಸ್ತ್ಯ ಅವರ ರಗಡ್ ಲುಕ್ ಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಈ ಚಿತ್ರವನ್ನು ಏ ರಾಯಲ್ ಆರ್ಚ್ ಸಿನಿಮಾಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು, ಸಾವದ್ ಎಂ ಮತ್ತು ಕಲ್ಕಿ ಅಗಸ್ತ್ಯ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಸಂತೋಷ್ ಜೋಶ್ವ ಸಂಗೀತ ಸಂಯೋಜನೆ ನೀಡಿದ್ದು, ಕೈಜರ್ ಛಾಯಾಗ್ರಹಣ ನಂದನ್ ಗಣೇಶ್ ಮತ್ತು ಜಯೇಂದ್ರ ಅವರ ಸಂಕಲನವಿದೆ ನಿರ್ದೇಶಕ ಸಾವದ್ ಎಂ ಸಂಭಾಷಣೆ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular