HomeKarnatakaಎಲೆಕ್ಷನ್ ಫಲಿತಾಂಶದ ಬಗ್ಗೆ ಭರ್ಜರಿ ಬೆಟ್ಟಿಂಗ್: ಅಡಿಕೆ ತೋಟವನ್ನೇ ಪಣಕಿಟ್ಟ ರೈತರು

ಎಲೆಕ್ಷನ್ ಫಲಿತಾಂಶದ ಬಗ್ಗೆ ಭರ್ಜರಿ ಬೆಟ್ಟಿಂಗ್: ಅಡಿಕೆ ತೋಟವನ್ನೇ ಪಣಕಿಟ್ಟ ರೈತರು

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಬೆಂಬಲಿಗರ ಭರಾಟೆ ಭರ್ಜರಿಯಾಗಿ ನಡೆಯುತ್ತಿದೆ. ಅಡಿಕೆ ತೋಟವನ್ನು ಕೂಡ ಬಾಜಿ ಕಟ್ಟಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಹಣ, ಟ್ರ್ಯಾಕ್ಟರ್, ಕಾರ್, ಕುರಿ ಮೊದಲಾದವುಗಳನ್ನು ಪಣಕ್ಕಿಡಲಾಗಿದೆ. ಚನ್ನಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜು ಪರವಾಗಿ ಇಬ್ಬರು ರೈತರು ತಲಾ ಎರಡು ಎಕರೆ ಅಡಿಕೆ ತೋಟ ಪಣಕ್ಕಿಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ನಿರಂಜನ್ ಕುಮಾರ್ ಪರವಾಗಿ ಪುರಸಭೆ ಸದಸ್ಯ ಒಂದು ಕೋಟಿ ರೂ. ಬೆಟ್ಟಿಂಗ್ ಘೋಷಣೆ ಮಾಡಿದ್ದಾರೆ. ಹೆಚ್.ಡಿ. ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರವಾಗಿ ವ್ಯಕ್ತಿಗಳು ತಲಾ 5 ಲಕ್ಷ ಬೆಟ್ ಕಟ್ಟಿ ಬಾಂಡ್ ಪೇಪರ್ ಮಾಡಿಸಿದ್ದಾರೆ. ನಾಗಮಂಗಲದಲ್ಲಿ ಚೆಲುವರಾಯಸ್ವಾಮಿ ಪರವಾಗಿ 13 ಲಕ್ಷ ರೂ. ಮೌಲ್ಯದ ಕಾರು, ಟ್ರ್ಯಾಕ್ಟರ್, ಟಗರುಗಳನ್ನು ರೈತರು ಬಾಜಿ ಕಟ್ಟಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular