HomeLive NewsALERT : ಒಂದೇ ಕಡೆ ಕುಳಿತು ಕೆಲಸ ಮಾಡುತ್ತೀರಾ ಎಚ್ಚರ.! ಆಯಸ್ಸನ್ನೇ ನುಂಗುತ್ತಿದೆ ಕಂಪ್ಯೂಟರ್ ಕೆಲಸ.!

ALERT : ಒಂದೇ ಕಡೆ ಕುಳಿತು ಕೆಲಸ ಮಾಡುತ್ತೀರಾ ಎಚ್ಚರ.! ಆಯಸ್ಸನ್ನೇ ನುಂಗುತ್ತಿದೆ ಕಂಪ್ಯೂಟರ್ ಕೆಲಸ.!

ಇಂದಿನ ಡಿಜಿಟಲ್ ಯುಗದ ಜೀವನಶೈಲಿಯಲ್ಲಿ ಗಂಟೆಗಟ್ಟಲೆ ಕಂಪ್ಯೂಟರ್ ಅಥವಾ ಮೊಬೈಲ್ ಮುಂದೆ ಕುಳಿತು ಕೆಲಸ ಮಾಡುವುದು ಅನಿವಾರ್ಯವಾಗಿದೆ. ಆದರೆ, ಈ ‘ಸೈಲೆಂಟ್ ಕಿಲ್ಲರ್’ ಅಭ್ಯಾಸವು ಮನುಷ್ಯನ ಆಯಸ್ಸನ್ನೇ ನುಂಗುತ್ತಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಕೇವಲ ಬೆನ್ನು ನೋವು ಮಾತ್ರವಲ್ಲದೆ, ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮತ್ತು ಸ್ನಾಯುಗಳ ದೌರ್ಬಲ್ಯದಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ರಕ್ತ ಪರಿಚಲನೆ ಮಂದಗಮಿಸಿ ಕೈ-ಕಾಲುಗಳಲ್ಲಿ ಬಾವು ಕಾಣಿಸಿಕೊಳ್ಳುವುದು ಹಾಗೂ ಮಾನಸಿಕ ಒತ್ತಡ ಹೆಚ್ಚಾಗುವುದು ಈ ಸೆಡೆಂಟರಿ ಲೈಫ್‌ಸ್ಟೈಲ್‌ನ (Sedentary Lifestyle) ಕರಾಳ ಮುಖಗಳಾಗಿವೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿ ಗಂಟೆಗೊಮ್ಮೆ ವಿರಾಮ ತೆಗೆದುಕೊಳ್ಳುವುದು ಮತ್ತು ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳುವುದು ಅತ್ಯಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇಂದಿನ ಜೀವನಶೈಲಿಯಲ್ಲಿ ಆಫೀಸ್ ಕೆಲಸ, ವರ್ಕ್ ಫ್ರಮ್ ಹೋಮ್ ಅಥವಾ ಆನ್‌ಲೈನ್ ಓದಿನ ಕಾರಣದಿಂದ ಗಂಟೆಗಟ್ಟಲೆ ಒಂದೇ ಕಡೆ ಕುಳಿತುಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ತಜ್ಞರ ಪ್ರಕಾರ ಈ ಅಭ್ಯಾಸವನ್ನು ನಿರ್ಲಕ್ಷಿಸಿದರೆ ಆರೋಗ್ಯಕ್ಕೆ ಭಾರಿ ಅಪಾಯ ಕಾಯ್ದಿದೆ ಎಂದು ತಜ್ಷರು ಎಚ್ಚರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಳಿತು ಕೆಲಸ ಮಾಡುವುದರಿಂದಾಗುವ ಅಪಾಯಗಳು:

ಸ್ನಾಯುಗಳ ದೌರ್ಬಲ್ಯ: ದೀರ್ಘಕಾಲ ಕುಳಿತುಕೊಳ್ಳುವುದರಿಂದ ಸ್ನಾಯುಗಳು ದುರ್ಬಲಗೊಳ್ಳುತ್ತವೆ ಮತ್ತು ಬೆನ್ನೆಲುಬಿನ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಸೊಂಟ ನೋವು ಕಾಣಿಸಿಕೊಳ್ಳುತ್ತದೆ.

ರಕ್ತ ಸಂಚಾರದ ವ್ಯತ್ಯಯ: ರಕ್ತ ಪರಿಚಲನೆ ನಿಧಾನವಾಗುವುದರಿಂದ ಕೈ ಮತ್ತು ಕಾಲುಗಳಲ್ಲಿ ಬಾವು (ವಾಪು) ಉಂಟಾಗಬಹುದು.

ದೀರ್ಘಕಾಲಿಕ ಕಾಯಿಲೆಗಳು: ಈ ಅಭ್ಯಾಸದಿಂದ ದೇಹದ ತೂಕ ಹೆಚ್ಚಾಗುವುದು, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹದ ಅಪಾಯ ಹೆಚ್ಚುತ್ತದೆ.

ಜೀವಕ್ರಿಯೆ ಕುಂಠಿತ: ದೈಹಿಕ ಚಟುವಟಿಕೆ ಇಲ್ಲದಿದ್ದರೆ ಕ್ಯಾಲರಿಗಳು ಸರಿಯಾಗಿ ಖರ್ಚಾಗದೆ ಚಯಾಪಚಯ ಕ್ರಿಯೆ ಮಂದಗಮಿಸುತ್ತದೆ.

ದೃಷ್ಟಿ ಮತ್ತು ಮಾನಸಿ ಆರೋಗ್ಯ: ನಿರಂತರವಾಗಿ ಸ್ಕ್ರೀನ್ ನೋಡುವುದರಿಂದ ಕಣ್ಣಿನ ದೃಷ್ಟಿ ಸಮಸ್ಯೆ ಹಾಗೂ ಮಾನಸಿಕವಾಗಿ ಏಕಾಗ್ರತೆ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.

ಈ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ:

  1. ಬೆನ್ನು ನೋವು ಮತ್ತು ಕುತ್ತಿಗೆ ನೋವು.
  2. ಕಣ್ಣು ಉರಿಯುವುದು ಅಥವಾ ದಣಿವು.
  3. ಕೈ ಮತ್ತು ಪಾದಗಳಲ್ಲಿ ಬಾವು ಅಥವಾ ನೋವು.
  4. ಅತಿಯಾದ ಸುಸ್ತು ಮತ್ತು ನಿದ್ರಾಹೀನತೆ.
  5. ಸ್ನಾಯುಗಳ ದೌರ್ಬಲ್ಯ ಮತ್ತು ಹಠಾತ್ ತೂಕ ಏರಿಕೆ.

ಪರಿಹಾರ ಕ್ರಮಗಳು ಅಥವಾ ಸಲಹೆಗಳು:

  • ವಿರಾಮ ತೆಗೆದುಕೊಳ್ಳಿ: ಪ್ರತಿ ಒಂದು ಗಂಟೆಗೊಮ್ಮೆ ಸೀಟಿನಿಂದ ಎದ್ದು 5 ನಿಮಿಷಗಳ ಕಾಲ ವಿರಾಮ ತೆಗೆದುಕೊಳ್ಳಿ.
  • ಚಟುವಟಿಕೆಯಿಂದಿರಿ: ಕೆಲಸದ ಮಧ್ಯೆ ಸ್ವಲ್ಪ ದೂರ ನಡೆಯಿರಿ ಅಥವಾ ಸ್ನಾಯುಗಳನ್ನು ಸಡಿಲಗೊಳಿಸುವ (Stretching) ವ್ಯಾಯಾಮ ಮಾಡಿ.
  • ಸರಿಯಾದ ಭಂಗಿ: ಕಂಪ್ಯೂಟರ್ ಸ್ಕ್ರೀನ್ ನಿಮ್ಮ ಕಣ್ಣಿನ ನೇರಕ್ಕೆ ಇರುವಂತೆ ನೋಡಿಕೊಳ್ಳಿ ಮತ್ತು ಬೆನ್ನು ನೇರವಾಗಿಟ್ಟು ಕುಳಿತುಕೊಳ್ಳಿ.
  • ಆಹಾರ ಮತ್ತು ನೀರು: ಸಮತೋಲಿತ ಆಹಾರ ಸೇವಿಸಿ ಮತ್ತು ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
  • ವ್ಯಾಯಾಮ: ನಿರಂತರವಾಗಿ ಯೋಗ ಅಥವಾ ನಿಯಮಿತ ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಸಾಧ್ಯವಾದರೆ ‘ಸ್ಟ್ಯಾಂಡಿಂಗ್ ಡೆಸ್ಕ್’ ಬಳಸಿ.

ನಿಮ್ಮ ಕೆಲಸ ಅನಿವಾರ್ಯವಾದರೂ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ ಎಂಬುದನ್ನು ನೆನಪಿಡಿ!

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular